1ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್ ಮತ್ತು ಮೆರಾರೀ.
2ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್.
3ಅಮ್ರಾಮನ ಮಕ್ಕಳು ಆರೋನ್, ಮೋಶೆ ಮತ್ತು ಮಿರ್ಯಾಮ್. ಆರೋನನ ಮಕ್ಕಳು ನಾದಾಬ್, ಅಬೀಹೂ, ಎಲ್ಲಾಜಾರ್ ಮತ್ತು ಈತಾಮಾರ್.
4ಎಲ್ಲಾಜಾರನು ಫೀನೆಹಾಸನನ್ನು ಪಡೆದನು; ಫೀನೆಹಾಸನು ಅಬೀಷೂವನನ್ನು ಪಡೆದನು;
5ಅಬೀಷೂವನು ಬುಕ್ಕೀಯನನ್ನು ಪಡೆದನು; ಬುಕ್ಕೀಯನು ಉಜ್ಜೀಯನನ್ನು ಪಡೆದನು.
6ಉಜ್ಜೀಯನು ಜೆರಹ್ಯನನ್ನು ಪಡೆದನು; ಜೆರಹ್ಯನು ಮೆರಾಯೋತನನ್ನು ಪಡೆದನು.
7ಮೆರಾಯೋತನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
8ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು.
9ಅಹೀಮಾಚನು ಅಜರ್ಯನನ್ನು ಪಡೆದನು; ಅಜರ್ಯನು ಯೋಹಾನಾನನನ್ನು ಪಡೆದನು.
10ಯೋಹಾನಾನನು ಅಜರ್ಯನನ್ನು ಪಡೆದನು. ಸೊಲೊಮೋನನು ಕಟ್ಟಿಸಿದ ಯೆರೂಸಲೇಮಿನ ದೇವಾಲಯದಲ್ಲಿ ಯಾಜಕ ಸೇವೆ ಮಾಡುತ್ತಿದ್ದವನು ಇವನೇ.
11ಅಜರ್ಯನು ಅಮರ್ಯನನ್ನು ಪಡೆದನು; ಅಮರ್ಯನು ಅಹೀಟೂಬನನ್ನು ಪಡೆದನು.
12ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಶಲ್ಲೂಮನನ್ನು ಪಡೆದನು.
13ಶಲ್ಲೂಮನು ಹಿಲ್ಕೀಯನನ್ನು ಪಡೆದನು; ಹಿಲ್ಕೀಯನು ಅಜರ್ಯನನ್ನು ಪಡೆದನು.
14ಅಜರ್ಯನು ಸೆರಾಯನನ್ನು ಪಡೆದನು; ಸೆರಾಯನು ಯೆಹೋಚಾದಾಕನನ್ನು ಪಡೆದನು.
15ನೆಬೂಕದ್ನೆಚ್ಚರನು ಯೆಹೋವನ ಪ್ರೇರಣೆಯಿಂದ ಯೆಹೂದ್ಯರನ್ನೂ ಯೆರೂಸಲೇಮಿನವರನ್ನೂ ಸೆರೆಯೊಯ್ದಾಗ ಯೆಹೋಚಾದಾಕನು ಅವರೊಡನೆ ಇದ್ದನು.
16ಲೇವಿಯ ಮಕ್ಕಳು ಗೇರ್ಷೋಮ್, ಕೆಹಾತ್, ಮೆರಾರೀ.
17ಗೇರ್ಷೋಮನ ಮಕ್ಕಳು ಲಿಬ್ನೀ ಮತ್ತು ಶಿಮ್ಮೀ.
18ಕೆಹಾತನ ಮಕ್ಕಳು ಅಮ್ರಾಮ್, ಇಚ್ಹಾರ್, ಹೆಬ್ರೋನ್ ಮತ್ತು ಉಜ್ಜೀಯೇಲ್ ಇವರೇ.
19ಮೆರಾರಿಯ ಮಕ್ಕಳು ಮಹ್ಲೀ ಮತ್ತು ಮುಷೀ. ಇವರೆಲ್ಲರೂ ಲೇವಿ ಗೋತ್ರಗಳ ಮೂಲಪುರುಷರು.
20ಗೇರ್ಷೋಮನ ಗೋತ್ರ: ಗೇರ್ಷೋಮನ ಮಗ ಲಿಬ್ನೀ. ಇವನ ಮಗ ಯಹತ್, ಇವನ ಮಗ ಜಿಮ್ಮ. ಜಿಮ್ಮನ ಮಗ ಯೋವಾಹ,
21ಯೋವಾಹನ ಮಗ ಇದ್ದೋ, ಇವನ ಮಗ ಜೆರಹ. ಜೆರಹನ ಮಗ ಯೆವತ್ರೈ.
22ಕೆಹಾತನ ಸಂತಾನದವರು: ಇವನ ಮಗ ಅಮ್ಮೀನಾದಾಬ್, ಇವನ ಮಗ ಕೋರಹ. ಕೋರಹನ ಮಗ ಅಸ್ಸೀರ್,
23ಇವನ ಮಗ ಎಲ್ಕಾನ. ಎಲ್ಕಾನನ ಮಗ ಎಬ್ಯಾಸಾಫ್. ಇವನ ಮಗ ಅಸ್ಸೀರ್.
24ಅಸ್ಸೀರನ ಮಗ ತಹತ್, ಇವನ ಮಗ ಊರೀಯೇಲ್. ಊರೀಯೇಲನ ಮಗ ಉಜ್ಜೀಯ, ಇವನ ಮಗ ಸೌಲ್.
25ಎಲ್ಕಾನನ ಮಕ್ಕಳು; ಅಮಾಸೈ, ಅಹೀಮೋತ್ ಮತ್ತು ಎಲ್ಕಾನ್ ಎಂಬವರು.
26ಎಲ್ಕಾನನ ಸಂತಾನದವರು. ಇವನ ಮಗನು, ಚೋಫೈ, ಇವನ ಮಗ ನಹತ್.
27ನಹತನ ಮಗ ಎಲೀಯಾಬ್, ಇವನ ಮಗ ಯೆರೋಹಾಮ್, ಇವನ ಮಗ ಎಲ್ಕಾನ್.
28ಸಮುವೇಲನ ಮಕ್ಕಳು ಯೋವೇಲ್ ಚೊಚ್ಚಲ ಮಗನು ಮತ್ತು ಅಬೀಯನು ಎರಡನೆಯವನು.
29ಮೆರಾರೀಯ ಸಂತಾನದವರು. ಇವನ ಮಗ ಮಹ್ಲೀ. ಇವನ ಮಗ ಲಿಬ್ನೀ, ಇವನ ಮಗ ಶಿಮ್ಮೀ. ಶಿಮ್ಮೀಯ ಮಗನು ಉಜ್ಜ.
30ಇವನ ಮಗನು ಶಿಮ್ಮಾ, ಇವನ ಮಗನು ಹಗ್ಗೀಯ, ಇವನ ಮಗನು ಅಸಾಯ.
31ಮಂಜೂಷವು ವಿಶ್ರಾಂತಿಹೊಂದಿದ ಮೇಲೆ ದಾವೀದನಿಂದ ಯೆಹೋವನ ಆಲಯದಲ್ಲಿ ವಾದ್ಯ ಸೇವೆಗೆ ನೇಮಿಸಲ್ಪಟ್ಟವರ ಪಟ್ಟಿ.
32ಸೊಲೊಮೋನನು ಯೆರೂಸಲೇಮಿನಲ್ಲಿ ಯೆಹೋವನ ಆಲಯವನ್ನು ಕಟ್ಟುವ ತನಕ ಅವರು ದೇವದರ್ಶನದ ಗುಡಾರವೆಂಬ ಆಲಯದ ಮುಂದೆ ತಮ್ಮ ಕ್ರಮಾನುಸಾರವಾಗಿ ವಾದ್ಯ ಸೇವೆಯನ್ನು ನಡೆಸುತ್ತಿದ್ದರು.
33ದೇವಾಲಯದ ಸೇವಕರೂ ಅವರ ವಂಶಾವಳಿಯೂ: ಕೆಹಾತ್ಯನಾದ ಹೇಮಾನನು ಮೊದಲನೆಯವನು. ಪ್ರಥಮ ಸಂಗೀತ ಮಂಡಳಿಯ ಗಾಯಕನಾದ ಇವನು ಯೋವೇಲನ ಮಗ, ಇವನು ಸಮುವೇಲನ ಮಗ.
34ಸಮುವೇಲನು ಎಲ್ಕಾನನ ಮಗ. ಇವನು ಯೆರೋಹಾಮನ ಮಗ, ಯೆರೋಹಾಮನು ಎಲೀಯೇಲನ ಮಗ, ಇವನು ತೋಹನ ಮಗ.
35ತೋಹನು ಚೂಫನ ಮಗ, ಇವನು ಎಲ್ಕಾನನ ಮಗ, ಎಲ್ಕಾನನು ಮಹತನ ಮಗ, ಮಹತನನು ಅಮಾಸೈಯ ಮಗ, ಅಮಾಸೈಯನು ಎಲ್ಕಾನನ ಮಗ.
36ಎಲ್ಕಾನನು ಯೋವೇಲನ ಮಗ, ಇವನು ಅಜರ್ಯನ ಮಗ. ಅಜರ್ಯನು ಚೆಫನ್ಯನ ಮಗ,
37ಇವನು ತಹತನ ಮಗ. ತಹತನು ಅಸೀರನ ಮಗ, ಅಸ್ಸೀರನು ಎಬ್ಯಾಸಾಫನ ಮಗ, ಇವನು ಕೋರಹನ ಮಗ, ಕೋರಹನು ಇಚ್ಹಾರನ ಮಗ.
38ಇಚ್ಹಾರನು ಕೆಹಾತನ ಮಗ, ಇವನು ಲೇವಿಯನ ಮಗ, ಲೇವಿಯು ಇಸ್ರಾಯೇಲನ ಮಗ.
39ಇವನ ಬಲಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನಾದ ಆಸಾಫನು ಎರಡನೆಯವನು. ಇವನು ಬೆರೆಕ್ಯನ ಮಗ, ಇವನು ಶಿಮ್ಮನ ಮಗ.
40ಶಿಮ್ಮನು ಮೀಕಾಯೇಲನ ಮಗ, ಇವನು ಬಾಸೇಯನ ಮಗ, ಬಾಸೇಯನು ಮಲ್ಕೀಯನ ಮಗ.
41ಮಲ್ಕೀಯನು ಎತ್ನಿಯ ಮಗ, ಇವನು ಜೆರಹನ ಮಗ, ಜೆರಹನು ಅದಾಯನ ಮಗನು.
42ಅದಾಯನು ಏತಾನನ ಮಗ, ಇವನು ಜಿಮ್ಮನ ಮಗ, ಜಿಮ್ಮನು ಶಿಮ್ಮೀಯ ಮಗ.
43ಶಿಮ್ಮೀಯು ಯಹತನ ಮಗ, ಇವನು ಗೇರ್ಷೋಮನ ಮಗ, ಗೇರ್ಷೋಮನು ಲೇವಿಯ ಮಗ.
44ಇವನ ಎಡಗಡೆಯಲ್ಲಿ ನಿಲ್ಲುತ್ತಿದ್ದ ಇವನ ಸಹೋದರನೂ, ಮೆರಾರಿಯನೂ ಆದ ಏತಾನನು ಮೂರನೆಯವನು. ಇವನು ಕೀಷೀಯ ಮಗ, ಇವನು ಅಬ್ದೀಯನ ಮಗ, ಇವನು ಮಲ್ಲೂಕನ ಮಗ.
45ಮಲ್ಲೂಕನು ಹಷಬ್ಯನ ಮಗ, ಇವನು ಅಮಚ್ಯನ ಮಗ, ಇವನು ಹಿಲ್ಕೀಯನ ಮಗ.
46ಹಿಲ್ಕೀಯನು ಅಮ್ಚೀಯನ ಮಗ, ಇವನು ಬಾನೀಯನ ಮಗ, ಬಾನೀಯು ಶೆಮೆರನ ಮಗ.
47ಶೆಮೆರನು ಮಹ್ಲೀಯ ಮಗ, ಇವನು ಮೂಷೀಯ ಮಗ. ಮೂಷೀಯು ಮೆರಾರಿಯ ಮಗ, ಮೆರಾರಿಯು ಲೇವಿಯ ಮಗನು.
48ಅವರ ಸಹೋದರರಾದ ಇತರ ಲೇವಿಯರು ದೇವಾಲಯದ ಗುಡಾರದ ಸೇವೆಗಾಗಿ ನೇಮಿಸಲ್ಪಟ್ಟರು.
49ದೇವರ ಸೇವಕನಾದ ಮೋಶೆಯ ಎಲ್ಲಾ ಆಜ್ಞೆಗಳಿಗೆ ಅನುಸಾರವಾಗಿ ಆರೋನನೂ, ಅವನ ಮಕ್ಕಳೂ ಇಸ್ರಾಯೇಲರಿಗೋಸ್ಕರ ಯಜ್ಞವೇದಿ, ಧೂಪವೇದಿ ಇವುಗಳ ಮೇಲೆ ಹೋಮ ಮಾಡುತ್ತಾ, ಧೂಪ ಹಾಕುತ್ತಾ, ದೇವಾಲಯದ ಅತಿಪರಿಶುದ್ಧ ಸ್ಥಳದ ಎಲ್ಲಾ ಸೇವೆಯನ್ನು ಮಾಡುತ್ತಾ, ದೋಷಪರಿಹಾರ ಮಾಡುತ್ತಾ ಇದ್ದರು.
50ಆರೋನನ ಸಂತಾನದವರು: ಆರೋನನ ಮಗ ಎಲ್ಲಾಜಾರ್, ಇವನ ಮಗ ಫೀನೆಹಾಸ್, ಫೀನೆಹಾಸನ ಮಗ ಅಬೀಷೂವ.
51ಅಬೀಷೂವನ ಮಗ ಬುಕ್ಕೀ, ಬುಕ್ಕೀಯ ಮಗ ಉಜ್ಜೀ, ಇವನ ಮಗ ಜೆರಹ್ಯಾಹ, ಇವನ ಮಗ ಮೆರಾಯೋತ್.
52ಮೆರಾಯೋತನ ಮಗ ಅಮರ್ಯ, ಅಮರ್ಯನ ಮಗ ಅಹೀಟೂಬ್.
53ಅಹೀಟೂಬನ ಮಗ ಚಾದೋಕ್, ಇವನ ಮಗ ಅಹಿಮಾಚ್.
54ಲೇವಿಯರಿಗೆ ಸ್ವತ್ತಾಗಿ ದೊರಕಿದ ಪಟ್ಟಣಗಳು: ಆರೋನನ ಸಂತಾನದವರಾದ ಕೇಹಾತನ ಗೋತ್ರದವರಿಗೆ ಚೀಟು ಮೊದಲು ಬಿದ್ದಿತು.
55ಆದುದರಿಂದ ಇಸ್ರಾಯೇಲರು ಅವರಿಗೆ ಯೆಹೂದ ಸೀಮೆಯ ಹೆಬ್ರೋನ್ ಪಟ್ಟಣವನ್ನೂ ಮತ್ತು ಅದರ ಸುತ್ತಲಿನ ಗೋಮಾಳಗಳನ್ನು ಕೊಟ್ಟರು.
56ಆದರೆ ಅದರ ಹೊಲಗಳನ್ನೂ ಅದಕ್ಕೆ ಸೇರಿದ ಗ್ರಾಮಗಳನ್ನೂ, ಯೆಫುನ್ನೆಯನ ಮಗನಾದ ಕಾಲೇಬನಿಗೆ ಕೊಟ್ಟರು.
57ಆರೋನನ ವಂಶದವರಿಗೆ ಹೆಬ್ರೋನ್ ಎಂಬ ಆಶ್ರಯ ನಗರವನ್ನು, ಲಿಬ್ನ ಮತ್ತು ಅದರ ಗೋಮಾಳಗಳು, ಯತ್ತೀರ್, ಎಷ್ಟೆಮೋವ, ಅವುಗಳ ಉಪನಗರಗಳೂ,
58ಹೀಲೇನ್, ದೆಬೀರ್
59ಆಷಾನ್, ಬೇತ್ಷೆಮೆಷ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳನ್ನೂ,
60ಬೆನ್ಯಾಮೀನನ ಕುಲದಿಂದ ಗೆಬ, ಅಲೆಮೆತ್, ಅನಾತೋತ್ ಎಂಬ ಗೋಮಾಳಸಹಿತವಾದ ಪಟ್ಟಣಗಳನ್ನೂ ಕೊಟ್ಟರು. ಅವರ ಕುಟುಂಬಗಳಿಗೆ ದೊರಕಿದ ಒಟ್ಟು ಪಟ್ಟಣಗಳು ಹದಿಮೂರು.
61ಕೆಹಾತ್ಯರ ಉಳಿದ ಕುಟುಂಬಗಳಿಗೆ ಚೀಟು ಹಾಕುವುದರ ಮೂಲಕ ಮನಸ್ಸೆ ಕುಲದ ಸ್ವತ್ತಿನಿಂದ ಹತ್ತು ಪಟ್ಟಣಗಳು ದೊರಕಿದವು.
62ಗೇರ್ಷೋಮ್ಯರ ಕುಟುಂಬಗಳಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ, ಬಾಷಾನಿನಲ್ಲಿರುವ ಮನಸ್ಸೆ ಕುಲಗಳ ಸ್ವತ್ತಿನಿಂದ ಹದಿಮೂರು ಪಟ್ಟಣಗಳು ದೊರಕಿದವು.
63ಮೆರಾರೀ ಕುಟುಂಬಗಳಿಗೆ ರೂಬೇನ್, ಗಾದ್, ಜೆಬುಲೂನ್ ಕುಲಗಳ ಸ್ವತ್ತಿನಿಂದ ಹನ್ನೆರಡು ಪಟ್ಟಣಗಳು ಚೀಟು ಹಾಕುವುದರಿಂದ ದೊರಕಿದವು.
64ಇಸ್ರಾಯೇಲರು ಲೇವಿಯರಿಗೆ ಆ ಪಟ್ಟಣಗಳನ್ನಲ್ಲದೆ ಅವುಗಳಿಗೆ ಸೇರಿದ ಗೋಮಾಳುಗಳನ್ನೂ ಕೊಟ್ಟರು.
65ಅವರು ಚೀಟು ಹಾಕಿ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನನ ಕುಲಗಳಿಂದ ಮೇಲೆ ಹೇಳಿದ ಪಟ್ಟಣಗಳನ್ನೂ ಕೊಟ್ಟರು.
66ಕೆಹಾತ್ಯರ ಕುಟುಂಬಗಳಿಗೆ ಎಫ್ರಾಯೀಮ್ಯರ ಸ್ವತ್ತಿನಿಂದ
67ಎಫ್ರಾಯೀಮ್ ಬೆಟ್ಟದಲ್ಲಿರುವ ಶೆಕೆಮ್ ಎಂಬ ಆಶ್ರಯ ನಗರ, ಗೆಜೆರ್ ಮತ್ತು ಅದರ ಉಪನಗರಗಳನ್ನೂ,
68ಯೊಕ್ಮೆಯಾಮ್ ಮತ್ತು ಅದರ ಗೋಮಾಳಗಳು, ಬೇತ್ ಹೋರೋನ್ ಮತ್ತು ಅದರ ಉಪನಗರಗಳು,
69ಅಯ್ಯಾಲೋನ್, ಗತ್ರಿಮ್ಮೋನ್, ಎಂಬ ಗೋಮಾಳ ಸಹಿತವಾದ ಪಟ್ಟಣಗಳು ಚೀಟಿಹಾಕುವುದರ ಮೂಲಕ ದೊರಕಿದವು.
70ಮನಸ್ಸೆ ಕುಲದ ಸ್ವತ್ತಿನ ಆನೇರ್, ಬಿಳ್ಳಾಮ್ ಎಂಬ ಹುಲ್ಲುಗಾವಲು ಸಹಿತವಾದ ಪಟ್ಟಣಗಳು ಕೆಹಾತ್ಯರ ಉಳಿದ ಕುಟುಂಬಗಳ ಪಾಲಿಗೆ ಬಂದವು.
71ಗೇರ್ಷೊಮ್ಯರಿಗೆ ಮನಸ್ಸೆ ಕುಲದ ಸ್ವತ್ತಿನಿಂದ ಬಾಷಾನಿನ ಗೋಲಾನ್, ಅಷ್ಟಾರೋಟ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
72ಇಸ್ಸಾಕಾರ್ಯರ ಸ್ವತ್ತಿನಿಂದ ಕೆದೆಷ್, ದಾಬೆರತ್,
73ರಾಮೋತ್, ಅನೇಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
74ಅಶೇರನ ಕುಲದ ಸ್ವತ್ತಿನಿಂದ ಮಾಷಾಲ್, ಅಬ್ದೋನ್.
75ಹೂಕೋಕ್, ರೆಹೋಬ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
76ನಫ್ತಾಲಿ ಕುಲದ ಸ್ವತ್ತಿನಿಂದ ಗಲಿಲಾಯದ ಕೆದೆಷ್, ಹಮ್ಮೋನ್, ಕಿರ್ಯಾತಯಿಮ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳು ದೊರಕಿದವು.
77ಮಿಕ್ಕ ಲೇವಿಯರಾದ ಮೆರಾರಿಯರಿಗೆ ಜೆಬುಲೋನ್ ಕುಲದ ಸ್ವತ್ತಿನಿಂದ ರಿಮ್ಮೋನೋ, ತಾಬೋರ್ ಎಂಬ ಗೋಮಾಳ ಸಹಿತವಾದ ಪಟ್ಟಣಗಳೂ,
78ಯೆರಿಕೋವಿನ ಬಳಿಯಲ್ಲಿ ಹರಿಯುವ ಯೊರ್ದನ್ ನದಿಯ ಪೂರ್ವದಿಕ್ಕಿನಲ್ಲಿರುವ ಅರಣ್ಯದ ಬೆಚೆರ್ ಮತ್ತು ಅದರ ಗೋಮಾಳಗಳು, ಯಹಚ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
79ಕೆದೇಮೋತ್ ಮತ್ತು ಅದರ ಗೋಮಾಳಗಳು, ಮೇಫಾತ್ ಮತ್ತು ಅದರ ಗೋಮಾಳಗಳು ರೂಬೇನ್ ಕುಲದಿಂದ ದೊರಕಿದವು.
80ಗಾದ್ ಕುಲದ ಸ್ವತ್ತಿನಿಂದ ಗಿಲ್ಯಾದಿನ ರಾಮೋತ್ ಮತ್ತು ಅದರ ಗೋಮಾಳಗಳು ಮಹನಯಿಮ್,
81ಹೆಷ್ಬೋನ್ ಮತ್ತು ಅದರ ಗೋಮಾಳಗಳು, ಯಗ್ಜೇರ್ ಮತ್ತು ಅದರ ಗೋಮಾಳಗಳು ಸಹಿತವಾದ ಪಟ್ಟಣಗಳು ದೊರಕಿದವು.