Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನ್ಯಾಯ - ನ್ಯಾಯ 6

ನ್ಯಾಯ 6:36-40

Help us?
Click on verse(s) to share them!
36ಮತ್ತು ಗಿದ್ಯೋನನು ದೇವರಿಗೆ, “ನೀನು ಹೇಳಿದಂತೆ ಇಸ್ರಾಯೇಲ್ಯರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೋ ಇಲ್ಲವೋ ಎಂಬುದನ್ನು ತಿಳಿಯಪಡಿಸು.
37ಇಗೋ, ನಾನು ಕಣದಲ್ಲಿ ಕುರಿಯ ಉಣ್ಣೆಯನ್ನು ಇಡುತ್ತೇನೆ; ಅದರಲ್ಲಿ ಮಾತ್ರ ಮಂಜುಬಿದ್ದು ನೆಲವೆಲ್ಲಾ ಒಣಗಿದ್ದರೆ ನೀನು ಹೇಳಿದಂತೆಯೇ ಇಸ್ರಾಯೇಲರನ್ನು ನನ್ನ ಮೂಲಕವಾಗಿ ರಕ್ಷಿಸುವಿಯೆಂದು ತಿಳಿಯುವೆನು” ಎಂಬುದಾಗಿ ವಿಜ್ಞಾಪಿಸಿದನು.
38ಹಾಗೆಯೇ ಆಯಿತು; ಅವನು ಮರುದಿನ ಹೊತ್ತಾರೆಯಲ್ಲಿ ಎದ್ದು ಉಣ್ಣೆಯನ್ನು ಒತ್ತಿ ಹಿಂಡಲು ಮಂಜಿನ ನೀರು ಒಂದು ಬಟ್ಟಲು ತುಂಬಾ ಆಯಿತು.
39ಅವನು ತಿರುಗಿ ದೇವರಿಗೆ, “ಸ್ವಾಮೀ, ಸಿಟ್ಟಾಗಬಾರದು; ಇನ್ನೊಂದು ಸಾರಿ ಮಾತನಾಡುತ್ತೇನೆ. ಇನ್ನು ಒಂದೇ ಸಾರಿ ಈ ಉಣ್ಣೆಯಿಂದ ನಿನ್ನನ್ನು ಪರೀಕ್ಷಿಸುವುದಕ್ಕೆ ಅಪ್ಪಣೆಯಾಗಲಿ; ಈ ಉಣ್ಣೆ ಮಾತ್ರವೇ ಒಣಗಿದ್ದು ನೆಲದ ಮೇಲೆಲ್ಲಾ ಹನಿ ಬಿದ್ದಿರಲಿ” ಅಂದನು.
40ಆ ರಾತ್ರಿ ದೇವರು ಹಾಗೆಯೇ ಮಾಡಿದನು; ಉಣ್ಣೆ ಮಾತ್ರ ಒಣಗಿತ್ತು, ನೆಲದ ಮೇಲೆಲ್ಲಾ ಹನಿ ಬಿದ್ದಿತ್ತು.

Read ನ್ಯಾಯ 6ನ್ಯಾಯ 6
Compare ನ್ಯಾಯ 6:36-40ನ್ಯಾಯ 6:36-40