Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯೆಹೋ

ಯೆಹೋ 16

Help us?
Click on verse(s) to share them!
1ಯೋಸೇಫನ ವಂಶದವರಿಗೆ ದೊರಕಿದ ಸ್ವತ್ತಿನ ಮೇರೆಯು: ಯೆರಿಕೋವಿನ ಬಳಿಯಲ್ಲಿ ಯೊರ್ದನ್ ತೀರದಿಂದ ಯೆರಿಕೋವಿನ ಪೂರ್ವದಲ್ಲಿದ್ದ ನದಿ, ಯೆರಿಕೋವಿಗೂ ಬೇತೇಲಿಗೂ ನಡುವೆ ಇರುವ ಬೆಟ್ಟದ ಸೀಮೆಯ ಅರಣ್ಯ ಹಾಗೂ
2ಬೇತೇಲ್ ಇವುಗಳ ಮೇಲೆ ಲೂಜಿಗೂ ಹೋಗುತ್ತದೆ. ಅಲ್ಲಿಂದ ಅರ್ಕಿಯರ ಮೇರೆಯನ್ನು ಅನುಸರಿಸಿ ಅಟಾರೋತಿಗೆ ಹೋಗುತ್ತದೆ
3ಅಲ್ಲಿಂದ ಇಳಿದು ಪಶ್ಚಿಮ ದಿಕ್ಕಿನಲ್ಲಿರುವ ಯಫ್ಲೇಟ್ಯರ ಪ್ರಾಂತ್ಯವನ್ನು ಮುಟ್ಟಿ ಕೆಳಗಿನ ಬೇತ್ ಹೋರೋನ್ ಮೇಲೆ ಗೆಜೆರಿಗೆ ಹೋಗಿ ಸಮುದ್ರ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
4ಇದು ಯೋಸೇಫನ ಮಕ್ಕಳಾದ ಮನಸ್ಸೆ, ಎಫ್ರಾಯೀಮ್ ಎಂಬ ಕುಲಗಳಿಗೆ ಸಿಕ್ಕಿದ ಸ್ವತ್ತಿನ ಮೇರೆಯು.
5ಎಫ್ರಾಯೀಮ್ ಗೋತ್ರಗಳ ದೇಶದ ದಕ್ಷಿಣ ದಿಕ್ಕಿನ ಮೇರೆಯು ಅಟಾರೋತದ್ದಾರಿನ ಪೂರ್ವ ದಿಕ್ಕಿನಿಂದ ಬೇತ್ ಹೋರೋನಿನ ಮೇಲೆ ಸಮುದ್ರತೀರಕ್ಕೆ ಹೋಗಿ ಅಲ್ಲಿ ಮುಕ್ತಾಯಗೊಳ್ಳುತ್ತದೆ.
6ಅದರ ಉತ್ತರ ದಿಕ್ಕಿನ ಮೇರೆಯು ಮಿಕ್ಮೆತಾತ್ ಯಿಂದ ಪೂರ್ವಕ್ಕೆ ತಿರುಗಿಕೊಂಡು ತಾನತ್ ಶೀಲೋ ಎಂಬಲ್ಲಿಗೆ ಹೋಗುತ್ತದೆ.
7ಅಲ್ಲಿಂದ ಯಾನೋಹ ಊರಿನ ಪೂರ್ವಮಾರ್ಗವಾಗಿ ಅಟಾರೋತ್, ನಾರಾ ಎಂಬ ಊರುಗಳ ಮೇಲೆ ಇಳಿಯುತ್ತಾ ಯೆರಿಕೋ ಪ್ರಾಂತ್ಯಕ್ಕೆ ಬಂದು ಯೊರ್ದನ್ ನದಿಯ ತೀರದಲ್ಲಿ ಮುಕ್ತಾಯಗೊಳ್ಳುತ್ತದೆ.
8ಅದರ ಮೇರೆಯು ತಪ್ಪೂಹದಿಂದ ಪಶ್ಚಿಮದ ಕಡೆಗೆ ಹೋಗುವ ಕಾನಾ ಹಳ್ಳವನ್ನು ಅನುಸರಿಸಿ ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಎಫ್ರಾಯೀಮ್ ಗೋತ್ರಗಳಿಗೆ ಸಿಕ್ಕಿದ ಸ್ವತ್ತು ಇವುಗಳೇ.
9ಇದಲ್ಲದೆ ಎಫ್ರಾಯೀಮ್ ಕುಲದವರ ಮತ್ತು ಮನಸ್ಸೆ ಕುಲದವರ ಮಧ್ಯದಲ್ಲಿ ಪ್ರತ್ಯೇಕವಾದ ಕೆಲವು ಪಟ್ಟಣಗಳು ಅವುಗಳಿಗೆ ಸೇರಿದ ಗ್ರಾಮಗಳು ದೊರಕಿದವು.
10ಅವರು ಗೆಜೆರಿನಲ್ಲಿದ್ದ ಕಾನಾನ್ಯರನ್ನು ಹೊರಡಿಸದೆ ಇದ್ದುದರಿಂದ ಅವರು ಇಂದಿನವರೆಗೂ ಎಫ್ರಾಯೀಮ್ಯರ ಮಧ್ಯದಲ್ಲಿ ದಾಸತ್ವದಲ್ಲಿದ್ದುಕೊಂಡು ಅವರಿಗೋಸ್ಕರ ಸೇವೆ ಮಾಡುತ್ತಿದ್ದಾರೆ.