Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ನ್ಯಾಯ - ನ್ಯಾಯ 19

ನ್ಯಾಯ 19:2-20

Help us?
Click on verse(s) to share them!
2ಆಕೆಯು ಇವನನ್ನು ಬಿಟ್ಟು ಜಾರತ್ವಮಾಡಿ, ಯೆಹೂದದ ಬೇತ್ಲೆಹೇಮಿನಲ್ಲಿದ್ದ ತನ್ನ ತವರುಮನೆಗೆ ಹೋಗಿ ಅಲ್ಲಿ ನಾಲ್ಕು ತಿಂಗಳು ಇದ್ದಳು.
3ಅನಂತರ ಆಕೆಯ ಗಂಡನಾದ ಆ ಲೇವಿಯನು ಆಕೆಯನ್ನು ಪ್ರೀತಿಯಿಂದ ಮಾತನಾಡಿಸಿ ತಿರುಗಿ ಮನೆಗೆ ಕರೆದುಕೊಂಡು ಹೋಗಬೇಕೆಂದು ಒಬ್ಬ ಸೇವಕನನ್ನೂ, ಎರಡು ಕತ್ತೆಗಳನ್ನೂ ತೆಗೆದುಕೊಂಡು ಅಲ್ಲಿಗೆ ಹೋದನು. ಆಕೆಯು ಅವನನ್ನು ತನ್ನ ತವರುಮನೆಯಲ್ಲಿ ಸೇರಿಸಿಕೊಂಡಳು; ಆಕೆಯ ತಂದೆಯೂ ಅವನನ್ನು ನೋಡಿ ಸಂತೋಷಪಟ್ಟನು.
4ಆ ಸ್ತ್ರೀಯ ತಂದೆಯಾದ ಅವನ ಮಾವನು ಅವನನ್ನು ಮೂರು ದಿನ ಅಲ್ಲೇ ಉಳಿಸಿಕೊಂಡನು; ಅವನೂ ಅವನ ಸೇವಕನೂ ಅನ್ನಪಾನಗಳನ್ನು ತೆಗೆದುಕೊಳ್ಳುತ್ತಾ ಅಲ್ಲಿದ್ದರು.
5ಅವರು ನಾಲ್ಕನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಮೊದಲು ಸ್ವಲ್ಪ ಊಟಮಾಡಿ ಬಲಹೊಂದು; ಆಮೇಲೆ ಹೋಗಬಹುದು” ಎಂದು ಹೇಳಲು
6ಅವರಿಬ್ಬರೂ ಕುಳಿತುಕೊಂಡು ಅನ್ನಪಾನಗಳನ್ನು ತೆಗೆದುಕೊಂಡರು. ಊಟವಾದ ಮೇಲೆ ಆ ಸ್ತ್ರೀಯ ತಂದೆಯು ಪುನಃ ಅವನಿಗೆ, “ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇದ್ದು ಸಂತೋಷಪಡು” ಎಂದು ಹೇಳಿದರೂ ಆ ಲೇವಿಯನು ಹೊರಡುವುದಕ್ಕಿದ್ದನು;
7ಆದರೆ ಅವನ ಮಾವನು ಬಹಳ ಒತ್ತಾಯ ಮಾಡಿದ್ದರಿಂದ ಆ ರಾತ್ರಿ ಅಲ್ಲಿಯೇ ಇಳಿದುಕೊಂಡನು.
8ಅವರು ಐದನೆಯ ದಿನ ಬೆಳಿಗ್ಗೆ ಎದ್ದು ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು, “ದಯವಿಟ್ಟು ಮಧ್ಯಾಹ್ನದವರೆಗೆ ಇಲ್ಲೇ ಇದ್ದು ಬಲಹೊಂದು” ಎಂದು ಅವನನ್ನು ಬೇಡಿಕೊಳ್ಳಲು ಅವರು ತಿರುಗಿ ಊಟಕ್ಕೆ ನಿಂತನು.
9ಅನಂತರ ಅವನೂ, ಅವನ ಉಪಪತ್ನಿಯೂ, ಸೇವಕನೂ ಹೋಗುವುದಕ್ಕೆ ಸಿದ್ಧರಾಗಲು ಆ ಸ್ತ್ರೀಯ ತಂದೆಯು ತನ್ನ ಅಳಿಯನಿಗೆ, “ಹೊತ್ತು ಹೋಯಿತು; ಸಾಯಂಕಾಲವಾಗುತ್ತಿದೆ, ದಯವಿಟ್ಟು ಈ ಹೊತ್ತಿನ ರಾತ್ರಿ ಇಲ್ಲೇ ಇರು; ನೋಡು, ಈ ರಾತ್ರಿ ಇಲ್ಲಿದ್ದು ನಮ್ಮೊಡನೆ ಸಂತೋಷಪಡು; ನಾಳೆ ಬೆಳಿಗ್ಗೆ ಎದ್ದು ನಿನ್ನ ಮನೆಗೆ ಹೋಗಬಹುದು” ಎಂದು ಬೇಡಿಕೊಂಡನು.
10ಆದರೆ ಆ ಲೇವಿಯನು ಒಪ್ಪದೆ ತನ್ನ ಎರಡು ಕತ್ತೆಗಳಿಗೆ ತಡಿಹಾಕಿಸಿ, ಉಪಪತ್ನಿಯನ್ನು ಕರೆದುಕೊಂಡು ಹೊರಟನು.
11ಅವರು ಯೆಬೂಸಿಯರ ಊರಾದ ಯೆರೂಸಲೇಮಿನ ಸಮೀಪಕ್ಕೆ ಬಂದಾಗ ಹೊತ್ತುಮುಳುಗುವ ಸಮಯವಾಗಿದ್ದರಿಂದ ಸೇವಕನು ದಣಿಗೆ, “ದಯವಿಟ್ಟು ಬಾ; ನಾವು ಯೆಬೂಸಿಯರ ಈ ಪಟ್ಟಣಕ್ಕೆ ಹೋಗಿ, ಅಲ್ಲಿ ರಾತ್ರಿಯನ್ನು ಕಳೆಯೋಣ” ಅಂದನು.
12ಆಗ ದಣಿಯು, “ನಾವು ಇಸ್ರಾಯೇಲ್ಯರಿಲ್ಲದ ಅನ್ಯರ ಪಟ್ಟಣದಲ್ಲಿ ಇಳಿಯಬಾರದು; ಗಿಬೆಯಕ್ಕೆ ಹೋಗೋಣ” ಅಂದನು.
13ಅವನು ತಿರುಗಿ ತನ್ನ ಆಳಿಗೆ, “ನಾವು ಬೇಗನೆ ಹೋಗಿ ಮುಂದಿರುವ ಗಿಬೆಯದಲ್ಲಾಗಲಿ, ರಾಮದಲ್ಲಾಗಲಿ ಇಳಿದುಕೊಳ್ಳೋಣ ಬಾ” ಅಂದನು.
14ಹೀಗೆ ಅವರು ಮುಂದೆ ಸಾಗಿ ಬೆನ್ಯಾಮೀನ್ಯರ ಗಿಬೆಯ ಊರಿನ ಸಮೀಪಕ್ಕೆ ಬಂದಾಗ ಸೂರ್ಯನು ಮುಳುಗಿದ್ದನು.
15ಅವರು ಇಳಿದುಕೊಳ್ಳುವುದಕ್ಕೋಸ್ಕರ ಗಿಬೆಯಕ್ಕೆ ಹೋದರು. ಆದರೆ ಯಾರೂ ಅವರನ್ನು ಮನೆಯಲ್ಲಿ ಉಳಿದುಕೊಳ್ಳಲು ಅವಕಾಶಕೊಡದ ಕಾರಣ ಅವರು ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು.
16ಅಷ್ಟರಲ್ಲಿ ಎಫ್ರಾಯೀಮಿನ ಪರ್ವತಪ್ರದೇಶಕ್ಕೆ ಸೇರಿದ ಒಬ್ಬ ಮುದುಕನು, ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸವಾಗಿದ್ದ ಆ ಮುದುಕನು ಸಾಯಂಕಾಲವಾದ್ದರಿಂದ ಕೆಲಸವನ್ನು ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದನು.
17ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು
18ಆ ಲೇವಿಯನು ಅವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮಿನ ಪರ್ವತಪ್ರದೇಶದ ಒಂದು ದೂರಸ್ಥಳದಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು; ಈಗ ತಿರುಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲಿಲ್ಲ.
19ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ; ನನಗೂ ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ, ದ್ರಾಕ್ಷಾರಸವೂ ಇರುತ್ತವೆ. ನಮಗೆ ಹೆಚ್ಚು ಏನೂ ಬೇಕಾಗಿರುವುದಿಲ್ಲ” ಎಂದು ಹೇಳಿದನು.
20ಆಗ ಆ ಮುದುಕನು, “ನಿನಗೆ ಶುಭವಾಗಲಿ; ನಿನಗೆ ಏನಾದರೂ ಕಡಿಮೆಯಾದರೆ ಅದನ್ನು ನೋಡಿಕೊಳ್ಳುತ್ತೇನೆ;

Read ನ್ಯಾಯ 19ನ್ಯಾಯ 19
Compare ನ್ಯಾಯ 19:2-20ನ್ಯಾಯ 19:2-20