Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 10

ಯಾಜ 10:5-13

Help us?
Click on verse(s) to share them!
5ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು.
6ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರಿಗೆ, “ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸಾಯುವಿರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾಗುವುದು. ಯೆಹೋವನು ಹೊತ್ತಿಸಿದ ಈ ಬೆಂಕಿಯ ದೆಸೆಯಿಂದ ನಿಮ್ಮ ಸಹೋದರರಾಗಿರುವ ಎಲ್ಲಾ ಇಸ್ರಾಯೇಲರ ಮನೆತನದವರೇ ದುಃಖಿಸಲಿ.
7ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು; ಹೋದರೆ ಸಾಯುವಿರಿ” ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡೆದುಕೊಂಡರು.
8ಯೆಹೋವನು ಆರೋನನೊಂದಿಗೆ ಮಾತನಾಡಿ,
9“ನೀನೂ ಹಾಗು ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಅಥವಾ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ಮತ್ತು ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತನಿಯಮ.
10ಅದಲ್ಲದೆ ದೇವರಿಗೆ ಮೀಸಲಾದ ವಸ್ತುಗಳನ್ನು ಅಲ್ಲದ ವಸ್ತುಗಳನ್ನು, ಶುದ್ಧವಾದವುಗಳನ್ನು, ಅಶುದ್ಧವಾದವುಗಳನ್ನು ವಿವೇಚಿಸುವುದೂ,
11ಯೆಹೋವನು ಮೋಶೆಯ ಮೂಲಕ ಇಸ್ರಾಯೇಲರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವುದೂ ನಿಮ್ಮ ಕರ್ತವ್ಯವಾಗಿದೆ” ಎಂದು ಹೇಳಿದನು.
12ಮೋಶೆ ಆರೋನನಿಗೂ ಅವನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೆ, “ಯೆಹೋವನಿಗೆ ಅಗ್ನಿಯ ಮೂಲಕ ಸಮರ್ಪಿತವಾದ ದ್ರವ್ಯಗಳಲ್ಲಿ ಉಳಿದಿರುವ ಧಾನ್ಯನೈವೇದ್ಯ ದ್ರವ್ಯವನ್ನು ತೆಗೆದುಕೊಂಡು, ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿ, ಯಜ್ಞವೇದಿಯ ಬಳಿಯಲ್ಲಿ ಊಟಮಾಡಬೇಕು. ಅದು ಮಹಾಪರಿಶುದ್ಧವಾಗಿದೆ.
13ಪವಿತ್ರಸ್ಥಳದೊಳಗೇ ಅದನ್ನು ಊಟಮಾಡಬೇಕು. ಜನರು ಯೆಹೋವನಿಗೆ ಸಮರ್ಪಿಸಿದ ಹೋಮದ್ರವ್ಯಗಳಲ್ಲಿ ಅದು ನಿನಗೂ ಮತ್ತು ನಿನ್ನ ಮಕ್ಕಳಿಗೂ ಸಲ್ಲತಕ್ಕದ್ದೆಂದು ಅಪ್ಪಣೆಯಾಗಿದೆ.

Read ಯಾಜ 10ಯಾಜ 10
Compare ಯಾಜ 10:5-13ಯಾಜ 10:5-13