Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 4

1 ಅರಸು 4:5-26

Help us?
Click on verse(s) to share them!
5ನಾತಾನನ ಮಗನಾದ ಅಜರ್ಯನು ದೇಶಾಧಿಪತಿಗಳ ಮುಖ್ಯಸ್ಥನು. ನಾತಾನನ ಮಗನಾದ ಜಾಬೂದನು ಯಾಜಕನೂ ಹಾಗು ಅರಸನ ಮಿತ್ರನೂ ಆಗಿದ್ದನು.
6ಅಹೀಷಾರನು ರಾಜಗೃಹಾಧಿಪತಿಯು. ಅಬ್ದನ ಮಗನಾದ ಅದೋನೀರಾಮನು ಬಿಟ್ಟೀಕೆಲಸ ಮಾಡಿಸುವವರ ಮುಖ್ಯಸ್ಥನು.
7ಸೊಲೊಮೋನನು ಎಲ್ಲಾ ಇಸ್ರಾಯೇಲರ ಮೇಲ್ವಿಚಾರಣೆಗಾಗಿ ಹನ್ನೆರಡು ಕಾರ್ಯನಿರ್ವಾಹಕರನ್ನು ನೇಮಿಸಿದನು. ಅವರಲ್ಲಿ ಪ್ರತಿಯೊಬ್ಬನು ಒಂದೊಂದು ತಿಂಗಳು ಅರಸನಿಗೂ ಮತ್ತು ಅವನ ಮನೆಯವರಿಗೂ ಬೇಕಾದ ಆಹಾರ ಪದಾರ್ಥಗಳನ್ನು ಪ್ರತಿವರ್ಷವೂ ಒದಗಿಸಿಕೊಡಬೇಕಾಗಿತ್ತು.
8ಅವರು ಯಾರಾರೆಂದರೆ ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿದ್ದ ಹೂರನ ಮಗ,
9ಮಾಕಾಚ್, ಶಾಲ್ಬೀಮ್, ಬೇತ್‌ಷೆಮೆಷ್‌, ಏಲೋನ್ ಬೇತ್ ಹಾನಾನ್‌ ಎಂಬ ಊರುಗಳ ಒಡೆಯನಾದ ದೆಕೆರನ ಮಗನು.
10ಅರುಬ್ಬೋತಿನಲ್ಲಿ ವಾಸವಾಗಿದ್ದ ಹೆಸೆದನ ಮಗ, ಅವನು ಸೋಕೋ ಮತ್ತು ಹೇಫೆರ್ ಎಂಬ ಪ್ರದೇಶಗಳಿಗೆ ಅಧಿಪತಿಯಾಗಿದ್ದನು.
11ದೋರ್ ಗುಡ್ಡದ ಪ್ರದೇಶದಲ್ಲಿದ್ದ ಅಬೀನಾದಾಬನ ಮಗ, ಸೊಲೊಮೋನನ ಮಗಳಾದ ಟಾಫತಳು ಅವನ ಹೆಂಡತಿಯಾಗಿದ್ದಳು.
12ತಾಣಕ್ ಮತ್ತು ಮೆಗಿದ್ದೋ, ಚಾರೆತಾನಿನ ಬಳಿಯಲ್ಲಿಯೂ ಇಜ್ರೇಲಿನ ಕೆಳಗಣಭಾಗಗಳೂ, ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೂ ಇರುವಂಥ ಯೊಕ್ಮೆಯಾನಿನ ಆಚೆಗೆ ವಿಸ್ತರಿಸಿಕೊಂಡಿರುವಂಥ ಬೇತ್ ಷೆಯಾನಿನ ಎಲ್ಲಾ ಪ್ರದೇಶ ಇವುಗಳಿಗೆ ಅಹೀಲೂದನ ಮಗನಾದ ಬಾಣಾ ಅಧಿಪತಿಯಾಗಿದ್ದನು.
13ರಾಮೋತ್ ಗಿಲ್ಯಾದಿನಲ್ಲಿದ್ದ ಗೆಬೇರನ ಮಗ, ಅವನು ಗಿಲ್ಯಾದಿನಲ್ಲಿ ಮನಸ್ಸೆಯ ಮಗನಾದ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲ್ಪಟ್ಟ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಪತಿಯಾಗಿದ್ದನು.
14ಮಹನಯಿಮಿನಲ್ಲಿದ್ದ ಇದ್ದೋವಿನ ಮಗನಾದ ಅಹೀನಾದಾಬನು.
15ನಫ್ತಾಲಿ ಪ್ರದೇಶದಲ್ಲಿದ್ದ ಅಹೀಮಾಚನು, ಅವನು ಸೊಲೊಮೋನನ ಮಗಳಾದ ಬಾಸೆಮತಳನ್ನು ಮದುವೆಮಾಡಿಕೊಂಡಿದ್ದನು.
16ಅಶೇರಿಗೂ ಮತ್ತು ಆಲೋತಿಗೂ ಒಡೆಯನಾದ ಹೂಷೈಯ ಮಗನಾದ ಬಾಣನು,
17ಇಸ್ಸಾಕಾರ್ ಪ್ರಾಂತ್ಯದಲ್ಲಿದ್ದ ಫಾರೂಹನ ಮಗನಾದ ಯೆಹೋಷಾಫಾಟನು,
18ಬೆನ್ಯಾಮೀನಿನಲ್ಲಿದ್ದ ಏಲನ ಮಗನಾದ ಶಿಮ್ಮೀ,
19ಅಮೋರಿಯರ ಅರಸನಾದ ಸೀಹೋನ್, ಬಾಷಾನಿನ ಅರಸನಾದ ಓಗ್ ಇವರ ರಾಜ್ಯವಾಗಿದ್ದ ಗಿಲ್ಯಾದ್ ಪ್ರದೇಶಕ್ಕೆಲ್ಲಾ ಒಬ್ಬನೇ ಅಧಿಪತಿಯಾಗಿದ್ದನು ಅವನು ಊರಿಯನ ಮಗನಾದ ಗೆಬೆರ್ ಎಂಬುವವನು.
20ಇಸ್ರಾಯೇಲರು ಮತ್ತು ಯೆಹೂದ್ಯರು ಸಮುದ್ರ ತೀರದ ಮರಳಿನಷ್ಟು ಅಸಂಖ್ಯರಾಗಿ ಅಭಿವೃದ್ಧಿಯಾದರು. ಅವರು ಅನ್ನಪಾನಗಳನ್ನು ಮಾಡುತ್ತಾ ತೃಪ್ತರಾಗಿ ಸಂತೋಷದಿಂದಿದ್ದರು.
21ಸೊಲೊಮೋನನು ಯೂಫ್ರೆಟಿಸ್ ನದಿ ಮೊದಲುಗೊಂಡು ಫಿಲಿಷ್ಟಿಯರ ಮತ್ತು ಐಗುಪ್ತ್ಯರ ದೇಶಗಳವರೆಗೂ ಇರುವ ಎಲ್ಲಾ ರಾಜ್ಯಗಳವರನ್ನು ಆಳುತ್ತಿದ್ದನು. ಅವರು ಅವನ ಜೀವಮಾನದಲ್ಲೆಲ್ಲಾ ಅವನಿಗೆ ಅಧೀನರಾಗಿ ಕಪ್ಪಕಾಣಿಕೆಗಳನ್ನು ಸಲ್ಲಿಸುತ್ತಿದ್ದರು.
22ಸೊಲೊಮೋನನ ಅರಮನೆಗೆ ಪ್ರತಿದಿನ ಬೇಕಾಗುವ ಆಹಾರಪದಾರ್ಥಗಳು, ಮೂವತ್ತು ಕೋರ್ ಗೋದಿಯ ಹಿಟ್ಟು, ಅರುವತ್ತು ಕೋರ್ ಜವೆಗೋದಿಯ ಹಿಟ್ಟು,
23ಹತ್ತು ಕೊಬ್ಬಿದ ಎತ್ತುಗಳು, ಇಪ್ಪತ್ತು ಹುಲ್ಲುಗಾವಲಿನಲ್ಲಿರುವ ಎತ್ತುಗಳು, ನೂರು ಕುರಿಗಳು ಇವುಗಳಲ್ಲದೆ ಕಡವೆ, ಜಿಂಕೆ, ಸಾರಂಗ, ಕೊಬ್ಬಿದ ಕೋಳಿಗಳು ಇವುಗಳೇ.
24ಅವನು ಯೂಫ್ರೆಟಿಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗಿರುವ ಈಚೆಯ ಎಲ್ಲಾ ಅರಸರಿಗೂ ದೊರೆಯಾಗಿದ್ದನು. ಅವನು ಸುತ್ತಣ ರಾಜರೊಡನೆ ಸಮಾಧಾನದಿಂದಿದ್ದನು.
25ಸೊಲೊಮೋನನ ಆಳ್ವಿಕೆಯಲ್ಲೆಲ್ಲಾ ದಾನ್ ಪಟ್ಟಣ ಮೊದಲುಗೊಂಡು ಬೇರ್ಷೆಬದವರೆಗಿರುವ ಸಮಸ್ತ ಇಸ್ರಾಯೇಲರೂ ಮತ್ತು ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರದ ಗಿಡ ಇವುಗಳ ನೆರಳಿನಲ್ಲಿ ವಾಸಮಾಡುತ್ತಾ ಸುರಕ್ಷಿತರಾಗಿದ್ದರು.
26ಸೊಲೊಮೋನನ ಲಾಯಗಳಲ್ಲಿ ನಲ್ವತ್ತು ಸಾವಿರ ರಥಾಶ್ವಗಳಿಗೆ ಸ್ಥಳವಿತ್ತು. ಅವನಿಗೆ ಹನ್ನೆರಡು ಸಾವಿರ ಕುದುರೆಸವಾರರಿದ್ದರು.

Read 1 ಅರಸು 41 ಅರಸು 4
Compare 1 ಅರಸು 4:5-261 ಅರಸು 4:5-26