Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಹೋಶೇ

ಹೋಶೇ 3

Help us?
Click on verse(s) to share them!
1ಯೆಹೋವನು ನನಗೆ, “ನೀನು ಅನ್ಯದೇವತೆಗಳ ಕಡೆಗೆ ತಿರುಗಿಕೊಂಡು, ದೀಪದ್ರಾಕ್ಷೆಯ ಅಡೆಗಳನ್ನು ಪ್ರೀತಿಸುವ ಇಸ್ರಾಯೇಲರನ್ನು ಯೆಹೋವನು ಪ್ರೀತಿಸುವ ಪ್ರಕಾರ, ನೀನು ಜಾರನಿಗೆ ಪ್ರಿಯಳೂ, ವ್ಯಭಿಚಾರಾಸಕ್ತಳೂ ಆದ ಹೆಂಗಸನ್ನು ಪ್ರೀತಿಸುತ್ತಾ ಬಾ” ಎಂದು ಅಪ್ಪಣೆ ಕೊಟ್ಟನು.
2ಆಗ ನಾನು ಹದಿನೈದು ಬೆಳ್ಳಿ ನಾಣ್ಯಗಳನ್ನೂ ಮತ್ತು ಒಂದುವರೆ ಹೋಮೆರ್ ಜವೆಗೋದಿಯನ್ನೂ ಕೊಟ್ಟು ಅವಳನ್ನು ಕೊಂಡುಕೊಂಡೆನು.
3ನಾನು ಅವಳಿಗೆ, “ನನಗಾಗಿ ಬಹು ದಿನಗಳು ತಾಳಿಕೊಂಡಿರು; ವ್ಯಭಿಚಾರ ಮಾಡಬೇಡ, ಯಾರೊಂದಿಗೂ ವ್ಯಭಿಚಾರಮಾಡಬೇಡ. ನಾನು ಸಹ ನಿನ್ನವನೇ, ನಿನ್ನ ಸಂಗಡ ವಾಸಿಸುವೆನು” ಎಂದು ಹೇಳಿದೆನು.
4ಇದರಂತೆ ರಾಜಮುಖಂಡ, ಯಜ್ಞ, ಸ್ತಂಭ, ಏಫೋದು, ವಿಗ್ರಹಗಳಿಲ್ಲದೆ ಇಸ್ರಾಯೇಲರು ಬಹಳ ದಿನಗಳು ತಾಳಿಕೊಂಡಿರುವರು.
5ಅನಂತರ ಅವರು ತಮ್ಮ ದೇವರಾದ ಯೆಹೋವನನ್ನೂ ಮತ್ತು ತಮ್ಮ ರಾಜನಾದ ದಾವೀದನನ್ನೂ ಪುನಃ ಆಶ್ರಯಿಸುವರು. ಹೌದು, ಅಂತ್ಯಕಾಲದಲ್ಲಿ ಯೆಹೋವನನ್ನೂ, ಆತನ ದಯೆಯನ್ನೂ ಭಯಭಕ್ತಿಯಿಂದ ಪಡೆಯುವರು.