5ಮನುಷ್ಯರ ಕಷ್ಟದಲ್ಲಿ ಅವರು ಭಾಗಿಗಳಾಗುವುದಿಲ್ಲ; ಇತರರಿಗೆ ತಗುಲುವಂತೆ ಅವರಿಗೆ ಅಂಟುರೋಗವೂ ತಗುಲುವುದಿಲ್ಲ.
6ಆದುದರಿಂದ ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ.
7ಕೊಬ್ಬಿನಿಂದ ಅವರ ಕಣ್ಣುಗಳು ಉಬ್ಬಿಕೊಂಡಿವೆ; ಅವರ ದುಷ್ಕಲ್ಪನೆಗಳು ತುಂಬಿತುಳುಕುತ್ತವೆ.
8ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತನಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.
9ತಾವು ಮೇಲುಲೋಕದವರೋ ಎಂಬಂತೆ ದೊಡ್ಡ ಬಾಯಿಮಾಡುತ್ತಾರೆ. ಭೂಲೋಕದಲ್ಲೆಲ್ಲಾ ಅವರ ಮಾತೇ ಮುಂದು.
10ಆದುದರಿಂದ ಜನರು ಅವರ ಪಕ್ಷವನ್ನು ಹಿಡಿಯುತ್ತಾರೆ; ಅವರು ಅವರಲ್ಲಿ ಯಾವುದೇ ತಪ್ಪನ್ನು ಕಂಡುಹಿಡಿಯಲಿಲ್ಲ.
11ಅವರು “ದೇವರು ವಿಚಾರಿಸುವುದೆಲ್ಲಿ? ಪರಾತ್ಪರನಾದ ದೇವರು ಚಿಂತಿಸುವದುಂಟೋ” ಅಂದುಕೊಳ್ಳುತ್ತಾರೆ.
12ನೋಡಿರಿ, ದುಷ್ಟರು ಇಂಥವರೇ; ಅವರು ಸದಾ ಸುಖದಿಂದಿದ್ದು ಸ್ಥಿತಿವಂತರಾಗಿ ಹೋಗುತ್ತಾರೆ.
13ನನ್ನ ಮನಸ್ಸನ್ನು ನಿರ್ಮಲಮಾಡಿಕೊಂಡಿದ್ದೂ, ಶುದ್ಧತ್ವದಲ್ಲಿ ಕೈತೊಳಕೊಂಡಿದ್ದೂ ವ್ಯರ್ಥವೇ ಸರಿ.
14ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು, ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ.