Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 1 ಅರಸು - 1 ಅರಸು 7

1 ಅರಸು 7:18-26

Help us?
Click on verse(s) to share them!
18ಇದಲ್ಲದೆ ಅವನು ತಾಮ್ರದ ದಾಳಿಂಬೆಹಣ್ಣುಗಳನ್ನು ಮಾಡಿ, ಅವುಗಳನ್ನು ಕಂಬಗಳ ಮೇಲಣ ಪ್ರತಿಯೊಂದು ಕುಂಭದ ಜಾಲರಿಯ ಸುತ್ತಲೂ ಎರಡೆರಡು ಸಾಲಾಗಿ ಸಿಕ್ಕಿಸಿದನು.
19ಕಂಬಗಳ ಮೇಲಿರುವ ಕುಂಭಗಳ ಒಡಲು ನಾಲ್ಕು ಮೊಳಗಳವರೆಗೆ ಕಮಲದ ಆಕಾರ ಉಳ್ಳದ್ದಾಗಿತ್ತು.
20ಆ ಕುಂಭಗಳ ಮೇಲಿರುವ ಭಾಗದಲ್ಲಿ ಒಡಲಿನ ಸುತ್ತಲೂ ಜಾಲರಿಯ ಹೊರಗೆ ದಾಳಿಂಬೆ ಹಣ್ಣಿನ ಆಕಾರವುಳ್ಳ ಗುಂಡುಗಳಿದ್ದವು. ಪ್ರತಿಯೊಂದು ಕುಂಭದ ಸುತ್ತಲೂ ಇನ್ನೂರು ಗುಂಡುಗಳನ್ನು ಸಾಲಾಗಿ ಸಿಕ್ಕಿಸಿದನು.
21ತರುವಾಯ ಅವನು ಆ ಎರಡು ಕಂಬಗಳನ್ನೂ ದೇವಾಲಯದ ಮಂಟಪದ ಬಳಿಯಲ್ಲಿ ನಿಲ್ಲಿಸಿ, ಬಲಗಡೆಯ ಕಂಬಕ್ಕೆ ಯಾಕೀನ್ ಎಂದೂ, ಎಡಗಡೆಯ ಕಂಬಕ್ಕೆ ಬೋವಜ್ ಎಂದು ಹೆಸರಿಟ್ಟನು.
22ಅವನು ಕಂಬಗಳ ಮೇಲೆ ಕಮಲಾಕಾರವನ್ನು ಮಾಡಿ ಅವುಗಳ ಕೆಲಸವನ್ನು ತೀರಿಸಿದನು.
23ಅನಂತರ ಹೀರಾಮನು ಸಮುದ್ರ ಎನಿಸಿಕೊಳ್ಳುವ ಒಂದು ಎರಕದ ಪಾತ್ರೆಯನ್ನು ಮಾಡಿದನು. ಅದರ ಬಾಯಿ‍ ಚಂದ್ರಾಕಾರವಾಗಿಯೂ, ಅಂಚಿನಿಂದ ಅಂಚಿಗೆ ಹತ್ತು ಮೊಳವಾಗಿಯೂ ಇತ್ತು. ಅದರ ಎತ್ತರ ಐದು ಮೊಳ ಮತ್ತು ಸುತ್ತಳತೆ ಮೂವತ್ತು ಮೊಳ.
24ಅದನ್ನು ಎರಕ ಹೊಯ್ಯುವಾಗ ಅದರ ಅಂಚಿನ ಕೆಳಗೆ ಸುತ್ತಲೂ ಹತ್ತತ್ತು ಮೊಳ ಉದ್ದವಾದ ಬಳ್ಳಿಗಳನ್ನು ಎರಡು ಸಾಲಾಗಿ ಎರಕ ಹೊಯ್ದಿದ್ದನು.
25ಹನ್ನೆರಡು ಎರಕದ ಹೋರಿಗಳು ಅದನ್ನು ಹೊತ್ತಿದ್ದವು. ಅವುಗಳಲ್ಲಿ ಮೂರು ಉತ್ತರ ದಿಕ್ಕಿಗೂ, ಮೂರು ಪಶ್ಚಿಮ ದಿಕ್ಕಿಗೂ, ಮೂರು ದಕ್ಷಿಣ ದಿಕ್ಕಿಗೂ ಮತ್ತು ಮೂರು ಪೂರ್ವದಿಕ್ಕಿಗೂ ಮುಖಮಾಡಿಕೊಂಡಿದ್ದವು. ಸಮುದ್ರವು ಅವುಗಳ ಬೆನ್ನಿನ ಮೇಲೆ ಇತ್ತು. ಅವುಗಳ ಹಿಂಭಾಗವು ಒಳಗಡೆ ಇತ್ತು.
26ಪಾತ್ರೆಯು ನಾಲ್ಕು ಬೆರಳು ದಪ್ಪವಾಗಿತ್ತು. ಅದರ ಅಂಚು ಕಮಲದ ಆಕಾರದ ಬಟ್ಟಲನ್ನು ಹೋಲುತ್ತಿತ್ತು. ಅದು ಎರಡು ಸಾವಿರ ಬಾನೆಗಳಷ್ಟು ನೀರು ಹಿಡಿಯುತ್ತಿತ್ತು.

Read 1 ಅರಸು 71 ಅರಸು 7
Compare 1 ಅರಸು 7:18-261 ಅರಸು 7:18-26