53ನಿನ್ನ ಧರ್ಮಶಾಸ್ತ್ರ ಭ್ರಷ್ಟರಾದ ದುಷ್ಟರಿಗಾಗಿ, ಕೋಪಗೊಂಡಿದ್ದೇನೆ.
54ನನ್ನ ಪ್ರವಾಸದ ಮನೆಯಲ್ಲಿ ನಿನ್ನ ಕಟ್ಟಳೆಗಳು ನನಗೆ ಗಾಯನವಾದವು.
55ಯೆಹೋವನೇ, ರಾತ್ರಿಯಲ್ಲಿ ನಿನ್ನ ನಾಮವನ್ನು ಸ್ಮರಿಸಿಕೊಳ್ಳುತ್ತೇನೆ, ನಿನ್ನ ಧರ್ಮಶಾಸ್ತ್ರವನ್ನು ಕೈಗೊಳ್ಳುತ್ತೇನೆ.
56ನಿನ್ನ ನಿಯಮಗಳನ್ನು ಅನುಸರಿಸಿದ್ದರಿಂದ ಇದೆಲ್ಲಾ ನನಗೆ ಲಭಿಸಿತು.
57ಹೇತ್. ಯೆಹೋವನೇ, ನನ್ನ ಪಾಲು ನೀನೇ, ನಿನ್ನ ವಾಕ್ಯಗಳನ್ನು ಕೈಗೊಳ್ಳುವೆನೆಂದು ನಿರ್ಣಯಿಸಿಕೊಂಡಿದ್ದೇನೆ.
58ಪೂರ್ಣಮನಸ್ಸಿನಿಂದ ನಿನ್ನ ದಯೆಯನ್ನು ಅಪೇಕ್ಷಿಸಿದ್ದೇನೆ, ನಿನ್ನ ನುಡಿಗನುಸಾರವಾಗಿ ನನಗೆ ಪ್ರಸನ್ನನಾಗು.
59ನನ್ನ ನಡತೆಯನ್ನು ಶೋಧಿಸಿದೆನು, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಕೊಂಡಿದ್ದೇನೆ.
60ನಿನ್ನ ಆಜ್ಞೆಗಳನ್ನು ಅನುಸರಿಸುವುದರಲ್ಲಿ ಆಸಕ್ತನಾದೆನು, ಆಲಸ್ಯಮಾಡಲಿಲ್ಲ.