32ನೀನು ನನ್ನ ಅಂತರಾತ್ಮವನ್ನು ವಿಮೋಚಿಸು, ಆಗ ಆಸಕ್ತಿಯಿಂದ ನಿನ್ನ ಆಜ್ಞಾಮಾರ್ಗವನ್ನು ಅನುಸರಿಸುವೆನು.
33ಹೇ. ಯೆಹೋವನೇ, ನಿನ್ನ ಕಟ್ಟಳೆಗಳ ಮಾರ್ಗವನ್ನು ನನಗೆ ಉಪದೇಶಿಸು, ಕಡೆಯವರೆಗೂ ಅದನ್ನೇ ಅನುಸರಿಸಿ ನಡೆಯುವೆನು.
34ನನಗೆ ತಿಳಿವಳಿಕೆಯನ್ನು ದಯಪಾಲಿಸು, ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು.
35ನಿನ್ನ ಆಜ್ಞಾಮಾರ್ಗದಲ್ಲಿ ನನ್ನನ್ನು ನಡೆಸು, ಅದೇ ನನ್ನ ಇಷ್ಟ.
36ನನ್ನ ಮನಸ್ಸನ್ನು ದ್ರವ್ಯಾಶೆಗಲ್ಲ, ನಿನ್ನ ಕಟ್ಟಳೆಗಳ ಕಡೆಗೆ ತಿರುಗಿಸು.
37ವ್ಯರ್ಥಕಾರ್ಯಗಳಲ್ಲಿ ದೃಷ್ಟಿಯಿಡದಂತೆ ನನ್ನನ್ನು ಕಾಪಾಡು, ನಿನ್ನ ಮಾರ್ಗದಲ್ಲಿ ನಡೆಯುವಂತೆ ನನ್ನನ್ನು ಚೈತನ್ಯಗೊಳಿಸು.
38ನಿನ್ನಲ್ಲಿ ಭಯಭಕ್ತಿಯುಳ್ಳವರಿಗಾಗಿ ನೀನು ಮಾಡಿದ ವಾಗ್ದಾನಗಳನ್ನು, ನಿನ್ನ ಸೇವಕನ ವಿಷಯದಲ್ಲಿ ನೆರವೇರಿಸು.
39ನನ್ನ ಅವಮಾನವನ್ನು ತೊಲಗಿಸು, ಅದಕ್ಕೋಸ್ಕರ ಅಂಜುತ್ತಿದ್ದೇನೆ. ನಿನ್ನ ಕಟ್ಟಳೆಗಳು ಹಿತಕರವಾಗಿವೆ.