Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಎಸ್ತೇ

ಎಸ್ತೇ 10

Help us?
Click on verse(s) to share them!
1ಅಹಷ್ವೇರೋಷ್ ರಾಜನು ತನ್ನ ರಾಜ್ಯಕ್ಕೆ ಸೇರಿರುವ ಎಲ್ಲಾ ದೇಶಗಳಿಗೂ ಮತ್ತು ಸಮುದ್ರದ್ವೀಪಗಳಿಗೂ ತೆರಿಗೆಯನ್ನು ವಿಧಿಸಿದನು.
2ಅವನ ಬಲ ಪ್ರತಾಪಯುಕ್ತವಾದ ಕೃತ್ಯಗಳೂ, ಅವನ ಅನುಗ್ರಹದಿಂದ ಮೊರ್ದೆಕೈಗೆ ಪ್ರಾಪ್ತವಾದ ದೊಡ್ಡಸ್ತಿಕೆಯ ವಿವರಗಳು ಮೇದ್ಯ ಮತ್ತು ಪಾರಸಿಯ ರಾಜಕಾಲ ವೃತ್ತಾಂತಗ್ರಂಥದಲ್ಲಿ ಬರೆದಿರುತ್ತವೆ.
3ಯೆಹೂದ್ಯನಾದ ಮೊರ್ದೆಕೈಯಾದರೋ ರಾಜ್ಯದಲ್ಲಿ ಅರಸನಾದ ಅಹಷ್ವೇರೋಷನ ದ್ವಿತೀಯ ಸ್ಥಾನದವನೂ, ಯೆಹೂದ್ಯರಲ್ಲಿ ಸನ್ಮಾನಿತನೂ, ತನ್ನ ಬಂಧುಬಳಗಕ್ಕೆ ಪ್ರೀತಿಪಾತ್ರನೂ, ಸ್ವಜನರ ಹಿತಚಿಂತಕನೂ ಮತ್ತು ಸ್ವಕುಲದವರೆಲ್ಲರಿಗೂ ಶಾಂತಿದೂತನೂ, ಪ್ರಾರ್ಥನಾಪರನೂ ಆಗಿದ್ದನು.