Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಪ.ಗೀ. - ಪ.ಗೀ. 2

ಪ.ಗೀ. 2:9-16

Help us?
Click on verse(s) to share them!
9ನನ್ನ ಪ್ರಿಯನು ಜಿಂಕೆಯಂತೆಯೂ ಪ್ರಾಯದ ಹರಿಣದಂತೆಯೂ ಇದ್ದಾನೆ. ಆಹಾ, ಇಗೋ ನಮ್ಮ ಗೋಡೆಯ ಆಚೆ ನಿಂತು, ಕಿಟಕಿಗಳ ಮೂಲಕ ನೋಡುತ್ತಾನೆ, ಜಾಲಾಂದ್ರಗಳ ಮೂಲಕ ಇಣಿಕುಹಾಕುತ್ತಾನೆ!
10ನನ್ನ ನಲ್ಲನು ನನಗೆ ಹೀಗೆಂದನು, “ನನ್ನ ಪ್ರಿಯತಮೇ, ಎನ್ನ ಸುಂದರಿಯೇ, ಎದ್ದು ನನ್ನೊಂದಿಗೆ ಬಾ!
11ಇಗೋ, ಚಳಿಗಾಲ ಕಳೆಯಿತು, ಮಳೆಗಾಲ ಮುಗಿಯಿತು;
12ಭೂಮಿಯಲ್ಲೆಲ್ಲಾ ಹೂವುಗಳು ಕಾಣುತ್ತವೆ, ಕುಡಿ ಸವರುವ ಕಾಲ ಬಂತು, ಬೆಳವಕ್ಕಿಯ ಕೂಗು ದೇಶದಲ್ಲಿ ಕೇಳಿಸುತ್ತದೆ;
13ಅಂಜೂರದ ಕಾಯಿಗಳು ಹಣ್ಣಾಗಿವೆ, ದ್ರಾಕ್ಷಿಯ ಬಳ್ಳಿಗಳು ಹೂಬಿಟ್ಟಿವೆ, ಅದರ ಪರಿಮಳವನ್ನು ಬೀರುತ್ತಿದೆ. ನನ್ನ ಪ್ರಿಯಳೇ, ಎನ್ನ ಸುಂದರಿಯೇ, ಎದ್ದು ನನ್ನೊಂದಿಗೆ ಬಾ!
14ಬಂಡೆಯ ಬಿರುಕುಗಳಲ್ಲಿಯೂ, ಸಂದುಗಳ ಮರೆಯಲ್ಲಿಯೂ ಇರುವ ನನ್ನ ಪಾರಿವಾಳವೇ! ನಿನ್ನ ರೂಪವನ್ನು ನನಗೆ ತೋರಿಸು, ನಿನ್ನ ಧ್ವನಿಯನ್ನು ಕೇಳಿಸು; ಯಾಕೆಂದರೆ ನಿನ್ನ ಸ್ವರ ಎಷ್ಟೋ ಇಂಪು, ನಿನ್ನ ರೂಪವು ಎಷ್ಟೋ ಅಂದ.”
15ತೋಟಗಳನ್ನು ಹಾಳುಮಾಡುವ ನರಿಗಳನ್ನು, ನರಿಮರಿಗಳನ್ನು ಹಿಡಿಯಿರಿ; ಹೂಬಿಟ್ಟಿರುವ ನಮ್ಮ ದ್ರಾಕ್ಷಿ ತೋಟಗಳು ಹಾಳು.
16ಎನ್ನಿನಿಯನು ನನ್ನವನೇ, ನಾನು ಅವನವಳೇ, ನೆಲದಾವರೆಗಳ ಮಧ್ಯದಲ್ಲಿ ಮಂದೆಯನ್ನು ಮೇಯಿಸುವವನಾಗಿದ್ದಾನೆ.

Read ಪ.ಗೀ. 2ಪ.ಗೀ. 2
Compare ಪ.ಗೀ. 2:9-16ಪ.ಗೀ. 2:9-16