Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಅರಸು - 2 ಅರಸು 13

2 ಅರಸು 13:12-17

Help us?
Click on verse(s) to share them!
12ಯೋವಾಷನ ಉಳಿದ ಚರಿತ್ರೆಯೂ, ಅವನ ಶೂರ ಕೃತ್ಯಗಳೂ, ಇವನು ಯೆಹೂದ್ಯರ ಅರಸನಾದ ಅಮಚ್ಯನು ಎಂಬವನೊಡನೆ ನಡಿಸಿದ ಯುದ್ಧದ ವಿವರವೂ ಇಸ್ರಾಯೇಲರ ರಾಜಕಾಲವೃತ್ತಾಂತ ಎಂಬ ಗ್ರಂಥದಲ್ಲಿ ಬರೆದಿರುತ್ತವೆ.
13ಯೋವಾಷನು ಪೂರ್ವಿಕರ ಬಳಿಗೆ ಸೇರಲು ಅವನ ಶವವನ್ನು ಸಮಾರ್ಯದೊಳಗೆ ಇಸ್ರಾಯೇಲರ ರಾಜಸ್ಮಶಾನದಲ್ಲಿ ಸಮಾಧಿಮಾಡಿದರು. ಇವನ ತರುವಾಯ ಯಾರೊಬ್ಬಾಮನು ಸಿಂಹಾಸನವನ್ನೇರಿದನು.
14ಆ ಕಾಲದಲ್ಲಿ ಎಲೀಷನು ಮರಣಕರವಾದ ರೋಗಕ್ಕೆ ಗುರಿಯಾದನು. ಇಸ್ರಾಯೇಲರ ಅರಸನಾದ ಯೋವಾಷನು ಇದನ್ನು ಕೇಳಿ ಅವನ ಬಳಿಗೆ ಹೋಗಿ, “ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲರಿಗೆ ರಥರಥಾಶ್ವಬಲಗಳಾಗಿದ್ದವನೇ” ಎಂದು ಕೂಗುತ್ತಾ ಅವನ ಮುಖದ ಮೇಲೆ ಬಿದ್ದು ಬಹಳವಾಗಿ ಅತ್ತನು.
15ಆಗ ಎಲೀಷನು ಇಸ್ರಾಯೇಲರ ಅರಸನಿಗೆ, “ಬಿಲ್ಲನ್ನೂ, ಬಾಣಗಳನ್ನೂ ತರಿಸು” ಎಂದು ಹೇಳಿದನು. ಅವನು ತೆಗೆದುಕೊಂಡನು.
16ಆಗ ಎಲೀಷನು ಇಸ್ರಾಯೇಲರ ಅರಸನಿಗೆ, “ಬಿಲ್ಲನ್ನು ಹಿಡಿದುಕೋ” ಎಂದು ಆಜ್ಞಾಪಿಸಿದನು. ಅವನು ಹಿಡಿದುಕೊಳ್ಳಲು ತನ್ನ ಕೈಯನ್ನು ಅವನ ಕೈಮೇಲಿಟ್ಟನು.
17ಎಲೀಷನು, “ಮೂಡಣ ದಿಕ್ಕಿಗಿರುವ ಕಿಟಕಿಯನ್ನು ತೆರೆ” ಎಂದನು. ಅವನು ತೆರೆದನು. ಅನಂತರ ಎಲೀಷನು, “ಬಾಣವನ್ನು ಎಸೆ” ಎಂದು ಆಜ್ಞಾಪಿಸಿದನು. ಅವನು ಎಸೆಯಲು ಎಲೀಷನು, “ಇದು ಜಯಪ್ರದವಾದ ಯೆಹೋವನ ಬಾಣ; ಅರಾಮ್ಯರನ್ನು ಜಯಿಸುವ ಬಾಣ. ನೀನು ಅರಾಮ್ಯರನ್ನು ಅಫೇಕದಲ್ಲಿ ಸೋಲಿಸಿ ಸಂಹರಿಸಿಬಿಡುವಿ” ಎಂದು ಹೇಳಿದನು.

Read 2 ಅರಸು 132 ಅರಸು 13
Compare 2 ಅರಸು 13:12-172 ಅರಸು 13:12-17