3ಆ ಸ್ರಾವವು ಹರಿಯುತ್ತಿದ್ದರು ಅಥವಾ ನಿಂತುಹೋಗಿದ್ದರು ಆ ದೇಹಸ್ಥಿತಿಯಿಂದ ಅವನು ಅಶುದ್ಧನು.
4ಅಂಥವನು ಮಲಗಿರುವ ಪ್ರತಿಯೊಂದು ಹಾಸಿಗೆಯೂ ಮತ್ತು ಕುಳಿತಿರುವ ಪ್ರತಿಯೊಂದು ಆಸನವೂ ಅಶುದ್ಧವು.
5ಅವನ ಹಾಸಿಗೆಯನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು; ಅವನು ಆ ದಿನದ ಸಾಯಂಕಾಲದವರೆಗೆ ಅಶುದ್ಧನಾಗಿರುವನು.
6ಸ್ರಾವವುಳ್ಳವನು ಕುಳಿತಿದ್ದ ಆಸನದ ಮೇಲೆ ಕುಳಿತುಕೊಂಡವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಆ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
7ಅವನ ಶರೀರವನ್ನು ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಸ್ನಾನಮಾಡಬೇಕು, ಅವನು ಆ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.