1ಅಂತಿಯೋಕ್ಯದಲ್ಲಿದ್ದ ಸಭೆಯೊಳಗೆ ಪ್ರವಾದಿಗಳೂ, ಬೋಧಕರೂ ಇದ್ದರು; ಅವರು ಯಾರೆಂದರೆ; ಬಾರ್ನಬ, ನೀಗರನೆಂಬ ಸಿಮೆಯೋನ, ಕುರೇನ್ಯದ ಲೂಕ್ಯ, ಸಾಮಂತ ಹೆರೋದನ ಜೊತೆಯಲ್ಲಿ ಬೆಳೆದ ಮೆನಹೇನ, ಸೌಲ ಇವರೇ.
2ಇವರು ಕರ್ತನನ್ನು ಆರಾಧಿಸುತ್ತಾ, ಉಪವಾಸಮಾಡುತ್ತಾ ಇದ್ದಾಗ ಪವಿತ್ರಾತ್ಮನು; “ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಬೇರ್ಪಡಿಸಿರಿ” ಎಂದು ಹೇಳಿದನು.
3ಆಗ ಅವರು ಉಪವಾಸವಿದ್ದು ಪ್ರಾರ್ಥಿಸಿ ಆ ಇಬ್ಬರ ಮೇಲೆ ಹಸ್ತಗಳನ್ನಿಟ್ಟು ಅವರನ್ನು ಕಳುಹಿಸಿಕೊಟ್ಟರು.
4ಹೀಗೆ ಅವರು ಪವಿತ್ರಾತ್ಮನಿಂದ ಕಳುಹಿಸಲ್ಪಟ್ಟವರಾಗಿ ಸೆಲ್ಯೂಕ್ಯಕ್ಕೆ ಬಂದರು; ಅಲ್ಲಿಂದ ಸಮುದ್ರದಲ್ಲಿ ಪ್ರಯಾಣವಾಗಿ ಕುಪ್ರದ್ವೀಪಕ್ಕೆ ಹೋದರು.
5ಸಲಮೀಸ್ ಎಂಬ ಸ್ಥಳಕ್ಕೆ ಸೇರಿ ಅಲ್ಲಿ ಯೆಹೂದ್ಯರ ಸಭಾಮಂದಿರಗಳಲ್ಲಿ ದೇವರ ವಾಕ್ಯವನ್ನು ಬೋಧಿಸಿದರು. ಮಾರ್ಕನೆನಿಸಿಕೊಳ್ಳುವ ಯೋಹಾನನು ಸಹಾಯಕನಾಗಿ ಅವರ ಸಂಗಡ ಇದ್ದನು.