Text copied!
Bibles in Kannada

1 ಅರಸು 2:9-21 in Kannada

Help us?

1 ಅರಸು 2:9-21 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ನೀನಾದರೋ ಅವನನ್ನು ಶಿಕ್ಷಿಸದೆ ಬಿಡಬೇಡ. ನೀನು ಬುದ್ಧಿವಂತನಲ್ಲವೋ. ಅವನ ಮುದಿತಲೆಯು ರಕ್ತಮಯವಾಗಿ ಸಮಾಧಿ ಸೇರುವಂತೆ ಏನು ಮಾಡಬೇಕೆಂದು ನಿನಗೆ ಗೊತ್ತಿರುತ್ತದೆ” ಎಂದು ಹೇಳಿದನು.
10 ಅನಂತರ ದಾವೀದನು ತನ್ನ ಪೂರ್ವಿಕರ ಬಳಿಗೆ ಸೇರಿದನು. ಅವನ ಶವವನ್ನು ದಾವೀದನಗರದಲ್ಲಿ ಸಮಾಧಿಮಾಡಿದರು.
11 ದಾವೀದನು ಇಸ್ರಾಯೇಲರನ್ನು ಆಳಿದ್ದು ಒಟ್ಟು ನಲ್ವತ್ತು ವರ್ಷ. ಹೇಗೆಂದರೆ, ಹೆಬ್ರೋನಿನಲ್ಲಿ ಏಳು ವರ್ಷ ಮತ್ತು ಯೆರೂಸಲೇಮಿನಲ್ಲಿ ಮೂವತ್ತಮೂರು ವರ್ಷ ಆಳ್ವಿಕೆ ಮಾಡಿದನು.
12 ಸೊಲೊಮೋನನು ತನ್ನ ತಂದೆಯಾದ ದಾವೀದನ ಸಿಂಹಾಸನವನ್ನು ಏರಿದನು. ಅವನ ರಾಜ್ಯವು ಬಹಳವಾಗಿ ಬಲಗೊಂಡಿತು.
13 ಹಗ್ಗೀತಳ ಮಗನಾದ ಅದೋನೀಯನು ಸೊಲೊಮೋನನ ತಾಯಿಯಾದ ಬತ್ಷೆಬೆಯ ದರ್ಶನಕ್ಕೆ ಬಂದನು. ಆಕೆಯು ಅವನನ್ನು, “ನೀನು ಸಮಾಧಾನದಿಂದ ಬಂದಿರುವೆಯೋ?” ಎಂದು ಕೇಳಿದಳು. ಅವನು, “ಹೌದು ಸಮಾಧಾನದಿಂದ ಬಂದೆನು” ಎಂದನು.
14 ಆಮೇಲೆ ಅವನು, “ನಿನಗೊಂದು ಮಾತು ಹೇಳಬೇಕೆಂದು ಬಂದಿದ್ದೇನೆ” ಎಂದನು. ಅದಕ್ಕೆ ಆಕೆಯು, “ಹೇಳು” ಎಂದಳು.
15 ಆಗ ಅವನು, “ಈ ರಾಜ್ಯವು ನನಗೆ ಬರಬೇಕಾಗಿತ್ತು. ನಾನೇ ಅರಸನಾಗುವೆನೆಂದು ಇಸ್ರಾಯೇಲರೆಲ್ಲರೂ ಎದುರುನೋಡುತ್ತಿದ್ದರೆಂಬುದು ನೀನು ಬಲ್ಲೆಯಷ್ಟೇ. ಆದರೆ ಅದು ತಪ್ಪಿ ನನ್ನ ತಮ್ಮನಿಗೆ ಹೋಯಿತು. ಅದು ಯೆಹೋವನಿಂದಲೇ ಅವನಿಗೆ ದೊರಕಿತು. ಅದಿರಲಿ, ಒಂದು ಬಿನ್ನಹವಿದೆ.
16 ಅದನ್ನು ತಿರಸ್ಕರಿಸಬೇಡ” ಎನ್ನಲು ಆಕೆಯು, “ಅದೇನು ಹೇಳು” ಎಂದಳು.
17 ಆಗ ಅವನು, “ದಯವಿಟ್ಟು ಶೂನೇಮ್ಯಳಾದ ಅಬೀಷಗ್ ಎಂಬಾಕೆಯನ್ನು ನನಗೆ ಹೆಂಡತಿಯನ್ನಾಗಿ ಕೊಡಬೇಕೆಂದು ಅರಸನಾದ ಸೊಲೊಮೋನನಿಗೆ ಹೇಳು. ಅವನು ನಿನ್ನ ಮಾತನ್ನು ತಳ್ಳಿಹಾಕುವುದಿಲ್ಲ” ಎಂದನು.
18 ಆಗ ಬತ್ಷೆಬೆಯು, “ಒಳ್ಳೇಯದು, ನಾನು ನಿನಗೋಸ್ಕರ ಅರಸನ ಸನ್ನಿಧಿಯಲ್ಲಿ ಅರಿಕೆಮಾಡುತ್ತೇನೆ” ಎಂದು ಹೇಳಿದಳು.
19 ಆಕೆಯು ಅದೋನೀಯನಿಗಾಗಿ ಮಾತನಾಡುವುದಕ್ಕೋಸ್ಕರ ಅರಸನಾದ ಸೊಲೊಮೋನನ ಬಳಿಗೆ ಬರುತ್ತಿರುವಾಗ ಅರಸನು ಎದ್ದುಹೋಗಿ ಆಕೆಯನ್ನು ಎದುರುಗೊಂಡು ನಮಸ್ಕರಿಸಿದನು. ಅನಂತರ ತಾನು ಸಿಂಹಾಸನದ ಮೇಲೆ ಕುಳಿತು, ರಾಜ ಮಾತೆಗೋಸ್ಕರ ಒಂದು ಆಸನವನ್ನು ತರಿಸಲು ಆಕೆಯು ಅವನ ಬಲಗಡೆಯಲ್ಲಿ ಕುಳಿತುಕೊಂಡಳು.
20 ಆಗ ಆಕೆಯು, “ಒಂದು ಸಣ್ಣ ಬಿನ್ನಹ ಉಂಟು. ಅದನ್ನು ತಿರಸ್ಕರಿಸಬೇಡ” ಎಂದು ಹೇಳಿದಳು. ಅರಸನು, “ನನ್ನ ತಾಯಿಯೇ ಏನು ಬೇಕು ಕೇಳು, ನಾನು ಆಗದು ಅನ್ನುವುದಿಲ್ಲ” ಎಂದನು.
21 ಆಗ ಆಕೆಯು, “ಶೂನೇಮ್ಯಳಾದ ಅಬೀಷಗ್ ಎಂಬಾಕೆಯು ನಿನ್ನ ಅಣ್ಣನಾದ ಅದೋನೀಯನಿಗೆ ಮದುವೆ ಮಾಡಿಕೊಡು” ಎಂದಳು.
1 ಅರಸು 2 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019