Text copied!
Bibles in Kannada

ಯೆಹೋ 11:3-11 in Kannada

Help us?

ಯೆಹೋ 11:3-11 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಕಾನಾನ್ಯರು, ಅಮೋರಿಯರು, ಹಿತ್ತಿಯರು, ಪೆರಿಜ್ಜೀಯರು, ಬೆಟ್ಟದ ಮೇಲಿನ ಪ್ರದೇಶದಲ್ಲಿದ್ದ ಯೆಬೂಸಿಯರು, ಹೆರ್ಮೋನಿನ ತಗ್ಗಿನಲ್ಲಿದ್ದ ಮಿಚ್ಪಾ ದೇಶದಲ್ಲಿದ್ದ ಹಿವ್ವಿಯರು ಇವರನ್ನೂ ಕರೆಕಳುಹಿಸಿದನು.
4 ಅವರು ಒಡನೆ ಬಹು ರಥಾಶ್ವಗಳಿಂದ ಕೂಡಿರುವ ತಮ್ಮ ಸರ್ವಸೈನ್ಯಗಳನ್ನು ತೆಗೆದುಕೊಂಡು ಹೊರಟರು. ಆ ಸೈನಿಕರು ಸಮುದ್ರ ತೀರದ ಮರಳಿನಂತೆ ಅಸಂಖ್ಯರಾಗಿದ್ದರು.
5 ಈ ಎಲ್ಲಾ ಅರಸರು ಒಟ್ಟಾಗಿ ಸೇರಿ ಮೇರೋಮ್ ಜಲಾಶಯದ ಬಳಿಯಲ್ಲಿ ಇಸ್ರಾಯೇಲ್ಯರೊಡನೆ ಯುದ್ಧಮಾಡುವುದಕ್ಕಾಗಿ ಇಳಿದುಕೊಂಡರು.
6 ಆಗ ಯೆಹೋವನು “ಯೆಹೋಶುವನಿಗೆ ನೀನು ಅವರಿಗೆ ಹೆದರಬೇಡ. ನಾಳೆ ಇದೇ ವೇಳೆಗೆ ಅವರನ್ನು ಇಸ್ರಾಯೇಲ್ಯರಿಗೆ ಒಪ್ಪಿಸುವೆನು, ಇಸ್ರಾಯೇಲರು ಅವರನ್ನು ಸಂಹರಿಸಿ ಬಿಡುವರು. ನೀನು ಅವರ ಕುದುರೆಗಳ ಹಿಂಗಾಲಿನ ನರಗಳನ್ನು ಕೊಯ್ದು ರಥಗಳನ್ನು ಸುಟ್ಟುಬಿಡಬೇಕು” ಅಂದನು.
7 ಯೆಹೋಶುವನು ಮಿಚ್ಪೆಯ ತನ್ನ ಎಲ್ಲಾ ಭಟರೊಡನೆ ಹೊರಟು ಹೋಗಿ, ಮೇರೋಮ್ ಜಲಾಶಯದ ಬಳಿಯಲ್ಲಿದ್ದ ಶತ್ರುಗಳ ಮೇಲೆ ಪಕ್ಕನೆ ಬಿದ್ದನು.
8 ಯೆಹೋವನು ಅವರನ್ನು ಇಸ್ರಾಯೇಲರ ಕೈಗೆ ಒಪ್ಪಿಸಿದನು. ಇವರು ಅವರನ್ನು ದೊಡ್ಡ ಚೀದೋನ್ ಹಾಗೂ ಮಿಸ್ರೆಫೋತ್ಮಯಿಮ್ ಎಂಬ ಊರುಗಳವರೆಗೂ ಪೂರ್ವದಿಕ್ಕಿನಲ್ಲಿರುವ ಮಿಚ್ಪೆಯ ಬೈಲಿನವರೆಗೂ ಅವರನ್ನು ಹಿಂದಟ್ಟಿ ಹೊಡೆದರು. ಒಬ್ಬನಾದರೂ ಉಳಿಯದಂತೆ ಎಲ್ಲರನ್ನೂ ಸಂಹರಿಸಿದರು.
9 ಯೆಹೋಶುವನು ಯೆಹೋವನ ಅಪ್ಪಣೆಗನುಸಾರವಾಗಿ ಅವರ ಕುದುರೆಗಳ ಹಿಂಗಾಲಿನ ನರಗಳನ್ನು ರಥಗಳನ್ನು ಸುಟ್ಟುಬಿಟ್ಟನು.
10 ಕೂಡಲೇ ಯೆಹೋಶುವನು ಹಿಂದಿರುಗಿ ಹಾಚೋರನನ್ನೂ ಅವರ ಅರಸನನ್ನೂ ಕತ್ತಿಯಿಂದ ಸಂಹರಿಸಿದನು. ಹಾಚೋರೆಂಬುವುದು ಪೂರ್ವಕಾಲದಲ್ಲಿ ಆ ಎಲ್ಲಾ ರಾಜ್ಯಗಳಿಗಿಂತಲು ಶ್ರೇಷ್ಠವಾಗಿತ್ತು.
11 ಇಸ್ರಾಯೇಲ್ಯರು ಅದರಲ್ಲಿದ್ದ ಎಲ್ಲರನ್ನು ಕತ್ತಿಯಿಂದ ಸಂಹರಿಸಿ ಹಾಚೋರ್ ಪಟ್ಟಣವನ್ನು ಸುಟ್ಟುಬಿಟ್ಟರು. ಒಂದು ಜೀವಿಯಾದರೂ ಉಳಿಯಲಿಲ್ಲ.
ಯೆಹೋ 11 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019