Text copied!
Bibles in Kannada

ಯಾಜ 22:18-25 in Kannada

Help us?

ಯಾಜ 22:18-25 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 “ನೀನು ಆರೋನನಿಗೂ, ಅವನ ಮಕ್ಕಳಿಗೂ ಹಾಗೂ ಇಸ್ರಾಯೇಲರೆಲ್ಲರಿಗೂ ಹೀಗೆ ಆಜ್ಞಾಪಿಸಬೇಕು, ‘ಇಸ್ರಾಯೇಲರಲ್ಲಿ ಆಗಲಿ, ಅವರ ನಡುವೆ ವಾಸಿಸುವ ಇತರರಲ್ಲಿಯಾಗಲಿ ಯಾವನಾದರೂ ಹರಕೆಯಾಗಿ ಅಥವಾ ಕಾಣಿಕೆಯಾಗಿ ಯೆಹೋವನಿಗೆ ಸರ್ವಾಂಗಹೋಮ ಮಾಡುವಾಗ,
19 ಅದು ಸಮರ್ಪಕವಾಗುವಂತೆ ದನಗಳಿಂದಾಗಲಿ ಅಥವಾ ಆಡು ಮತ್ತು ಕುರಿಗಳಿಂದಾಗಲಿ ಪೂರ್ಣಾಂಗವಾದ ಗಂಡನ್ನೇ ಸಮರ್ಪಿಸಬೇಕು.
20 ಕುಂದುಕೊರತೆ ಇರುವಂಥದ್ದನ್ನು ತರಬಾರದು; ಅಂಥದು ಸಮರ್ಪಣೆ ಆಗುವುದಿಲ್ಲ.
21 ಯಾವನಾದರೂ ಸಮಾಧಾನಯಜ್ಞಕ್ಕಾಗಿ ಹರಕೆಯಾಗಿ ಅಥವಾ ಕಾಣಿಕೆಯಾಗಿ ದನವನ್ನು ಅಥವಾ ಹಿಂಡಿನ ಆಡು ಇಲ್ಲವೇ ಕುರಿಗಳನ್ನು ತಂದರೆ ಅವು ಯೆಹೋವನಿಗೆ ಸಮರ್ಪಕವಾಗುವುದಕ್ಕಾಗಿ ಅದು ಪೂರ್ಣಾಂಗವಾಗಿಯೇ ಇರಬೇಕು; ಅದರಲ್ಲಿ ಯಾವ ಕುಂದುಕೊರತೆಯೂ ಇರಬಾರದು.
22 ಕುರುಡಾದದ್ದು, ಕುಂಟಾದದ್ದು, ಗಾಯವಾದದ್ದು, ಹುಣ್ಣುಳ್ಳದ್ದು, ಕಜ್ಜಿ ತುರಿಯುಳ್ಳದ್ದು ಇಂಥವುಗಳನ್ನು ಯೆಹೋವನಿಗೆ ಸಮರ್ಪಿಸಲೇಬಾರದು, ಯಜ್ಞವೇದಿಯ ಮೇಲೆ ಹೋಮ ಮಾಡಲೇಬಾರದು.
23 ಹೋರಿಯ ಇಲ್ಲವೆ ಕುರಿಯ ಅವಯವಗಳಲ್ಲಿ ಏನಾದರೂ ಹೆಚ್ಚುಕಡಿಮೆ ಇದ್ದರೆ ಅದನ್ನು ಕಾಣಿಕೆಯಾಗಿ ಸಮರ್ಪಿಸಬಹುದೇ ಹೊರತು ಹರಕೆಯಾಗಿ ಒಪ್ಪಿಸಿದರೆ ಅದು ಸಮರ್ಪಣೆ ಆಗುವುದಿಲ್ಲ.
24 ಬೀಜಹೊಡೆದ, ಕುಟ್ಟಿದ, ಒಡೆದ ಮತ್ತು ಕೊಯ್ದ ಪಶುವನ್ನು ಯೆಹೋವನಿಗೆ ಸಮರ್ಪಿಸಬಾರದು, ಮತ್ತು ನಿಮ್ಮ ದೇಶದಲ್ಲಿ ಪಶುಗಳಿಗೆ ಹಾಗೆ ಮಾಡಲೇ ಬಾರದು.
25 ಅನ್ಯದೇಶದವನಿಂದ ತೆಗೆದುಕೊಂಡ ಅಂತಹ ಪಶುವನ್ನು ನಿಮ್ಮ ದೇವರಿಗೆ ಆಹಾರವಾಗಿ ಒಪ್ಪಿಸಬಾರದು; ಅದು ಕುಂದುಳ್ಳದ್ದು, ಪೂರ್ಣಾಂಗವಾದುದಲ್ಲ; ಆದಕಾರಣ ಸಮರ್ಪಣೆ ಆಗುವುದಿಲ್ಲ’” ಅಂದನು.
ಯಾಜ 22 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019