Text copied!
Bibles in Kannada

ಯಾಜ 10:3-12 in Kannada

Help us?

ಯಾಜ 10:3-12 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಮೋಶೆ ಆರೋನನಿಗೆ, “ಯೆಹೋವನು ಹೇಳಿದ ಮಾತಿಗೆ ಇದೇ ದೃಷ್ಟಾಂತ; ಆ ಮಾತು ಏನೆಂದರೆ, ‘ನಾನು ಪರಿಶುದ್ಧನೆಂಬುದನ್ನು ನನ್ನ ಬಳಿಯಲ್ಲಿರುವವರ ಮೂಲಕವಾಗಿಯೇ ತೋರ್ಪಡಿಸುವೆನು, ಜನರೆಲ್ಲರಿಗೆ ತಿಳಿಯುವಂತೆ ನನ್ನ ಘನತೆಯನ್ನು ಸ್ಥಾಪಿಸುವೆನು ಎಂಬುದೇ’” ಎಂದು ಹೇಳಿದನು. ಅದಕ್ಕೆ ಆರೋನನು ಮೌನವಾಗಿದ್ದನು.
4 ಮೋಶೆ ಆರೋನನ ಚಿಕ್ಕಪ್ಪನಾದ ಉಜ್ಜಿಯೇಲನ ಮಕ್ಕಳಾದ ಮೀಶಾಯೇಲನನ್ನು ಮತ್ತು ಎಲ್ಸಾಫಾನನನ್ನು ಕರೆಯಿಸಿ, “ನೀವು ಸಮೀಪಕ್ಕೆ ಬಂದು ನಿಮ್ಮ ಅಣ್ಣಂದಿರ ಶವಗಳನ್ನು ದೇವಮಂದಿರದ ಎದುರಿನಿಂದ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋಗಬೇಕು” ಅಂದನು.
5 ಮೋಶೆಯ ಅಪ್ಪಣೆಯ ಮೇರೆಗೆ ಅವರು ಸಮೀಪಕ್ಕೆ ಬಂದು ಸತ್ತವರು ತೊಟ್ಟುಕೊಂಡಿದ್ದ ನಿಲುವಂಗಿಗಳನ್ನು ತೆಗೆಯದೆ ಅವರ ಶವಗಳನ್ನು ಎತ್ತಿ ಪಾಳೆಯದ ಹೊರಕ್ಕೆ ಹೊತ್ತುಕೊಂಡು ಹೋದರು.
6 ಮೋಶೆ ಆರೋನನಿಗೂ ಅವನ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬುವವರಿಗೆ, “ನೀವು ತಲೆಯನ್ನು ಕೆದರಿಕೊಳ್ಳಬಾರದು; ಬಟ್ಟೆಗಳನ್ನು ಹರಿದುಕೊಳ್ಳಬಾರದು. ಹಾಗೆ ಮಾಡಿದರೆ ನೀವೂ ಸಾಯುವಿರಿ; ಅದಲ್ಲದೆ ಯೆಹೋವನಿಗೆ ಜನಸಮೂಹದವರೆಲ್ಲರ ಮೇಲೆ ಸಿಟ್ಟು ಉಂಟಾಗುವುದು. ಯೆಹೋವನು ಹೊತ್ತಿಸಿದ ಈ ಬೆಂಕಿಯ ದೆಸೆಯಿಂದ ನಿಮ್ಮ ಸಹೋದರರಾಗಿರುವ ಎಲ್ಲಾ ಇಸ್ರಾಯೇಲರ ಮನೆತನದವರೇ ದುಃಖಿಸಲಿ.
7 ಯೆಹೋವನ ಅಭಿಷೇಕ ತೈಲವು ನಿಮ್ಮ ಮೇಲಿರುವುದರಿಂದ ನೀವು ದೇವದರ್ಶನದ ಗುಡಾರದ ಬಾಗಿಲನ್ನು ಬಿಟ್ಟು ಹೋಗಬಾರದು; ಹೋದರೆ ಸಾಯುವಿರಿ” ಎಂದು ಹೇಳಿದನು. ಮೋಶೆಯ ಮಾತಿನಂತೆಯೇ ಅವರು ನಡೆದುಕೊಂಡರು.
8 ಯೆಹೋವನು ಆರೋನನೊಂದಿಗೆ ಮಾತನಾಡಿ,
9 “ನೀನೂ ಹಾಗು ನಿನ್ನ ಮಕ್ಕಳೂ ದ್ರಾಕ್ಷಾರಸವನ್ನಾಗಲಿ ಅಥವಾ ಮದ್ಯವನ್ನಾಗಲಿ ಕುಡಿದು ದೇವದರ್ಶನದ ಗುಡಾರದೊಳಗೆ ಬರಬಾರದು; ಹಾಗೆ ಬಂದರೆ ಸಾಯುವಿರಿ. ಇದು ನಿನಗೂ ಮತ್ತು ನಿನ್ನ ಸಂತತಿಯವರೆಲ್ಲರಿಗೂ ಶಾಶ್ವತನಿಯಮ.
10 ಅದಲ್ಲದೆ ದೇವರಿಗೆ ಮೀಸಲಾದ ವಸ್ತುಗಳನ್ನು ಅಲ್ಲದ ವಸ್ತುಗಳನ್ನು, ಶುದ್ಧವಾದವುಗಳನ್ನು, ಅಶುದ್ಧವಾದವುಗಳನ್ನು ವಿವೇಚಿಸುವುದೂ,
11 ಯೆಹೋವನು ಮೋಶೆಯ ಮೂಲಕ ಇಸ್ರಾಯೇಲರಿಗೆ ಮಾಡಿದ ಎಲ್ಲಾ ಆಜ್ಞೆಗಳನ್ನು ಜನರಿಗೆ ಬೋಧಿಸುವುದೂ ನಿಮ್ಮ ಕರ್ತವ್ಯವಾಗಿದೆ” ಎಂದು ಹೇಳಿದನು.
12 ಮೋಶೆ ಆರೋನನಿಗೂ ಅವನ ಉಳಿದ ಮಕ್ಕಳಾದ ಎಲ್ಲಾಜಾರ್ ಮತ್ತು ಈತಾಮಾರ್ ಎಂಬವರಿಗೆ, “ಯೆಹೋವನಿಗೆ ಅಗ್ನಿಯ ಮೂಲಕ ಸಮರ್ಪಿತವಾದ ದ್ರವ್ಯಗಳಲ್ಲಿ ಉಳಿದಿರುವ ಧಾನ್ಯನೈವೇದ್ಯ ದ್ರವ್ಯವನ್ನು ತೆಗೆದುಕೊಂಡು, ಅದರಿಂದ ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿಸಿ, ಯಜ್ಞವೇದಿಯ ಬಳಿಯಲ್ಲಿ ಊಟಮಾಡಬೇಕು. ಅದು ಮಹಾಪರಿಶುದ್ಧವಾಗಿದೆ.
ಯಾಜ 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019