Text copied!
Bibles in Kannada

ಪ್ರಸ 3:16-21 in Kannada

Help us?

ಪ್ರಸ 3:16-21 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

16 ಇದಲ್ಲದೆ ನಾನು ಲೋಕದಲ್ಲಿ ದೃಷ್ಟಿಸಿ ನ್ಯಾಯಸ್ಥಾನದಲ್ಲಿಯೂ, ಧರ್ಮಸ್ಥಾನದಲ್ಲಿಯೂ ಅಧರ್ಮವಿರುವುದೆಂದು ನೋಡಿದೆನು.
17 ಆಗ ನಾನು ಮನಸ್ಸಿನಲ್ಲಿ, “ದೇವರು ನೀತಿವಂತನಿಗೂ, ಅನೀತಿವಂತನಿಗೂ ನ್ಯಾಯತೀರಿಸುವನು. ಆತನ ನ್ಯಾಯಕ್ರಮಗಳಿಗೂ, ಎಲ್ಲಾ ಕೆಲಸಕಾರ್ಯಗಳಿಗೂ ತಕ್ಕ ಸಮಯ ಉಂಟು” ಎಂದು ಅಂದುಕೊಂಡೆನು.
18 ನಾನು ನನ್ನ ಮನಸ್ಸಿನಲ್ಲಿ ಹೀಗೆ ಯೋಚಿಸಿದೆನು, “ದೇವರು ಮನುಷ್ಯರನ್ನು ಪರೀಕ್ಷಿಸಿ, ಅವರು ಪಶುಗಳಿಗೆ ಸಮಾನರು ಎಂಬುದನ್ನು ತೋರಿಸುತ್ತಾನೆ.”
19 ಮನುಷ್ಯನ ಗತಿಯೂ ಪಶುವಿನ ಗತಿಯೂ ಒಂದೇ. ಪಶುವಿಗೆ ಸಾವು ಬರುವ ಹಾಗೆ ಮನುಷ್ಯನಿಗೂ ಬರುವುದು. ಎಲ್ಲಕ್ಕೂ ಪ್ರಾಣ ಒಂದೇ. ಮನುಷ್ಯನು ಪಶುವಿಗಿಂತ ಶ್ರೇಷ್ಠನಲ್ಲ. ಎಲ್ಲವು ವ್ಯರ್ಥವೇ.
20 ಎಲ್ಲಾ ಪ್ರಾಣಿಗಳು ಒಂದೇ ಸ್ಥಳಕ್ಕೆ ಹೋಗುವವು. ಎಲ್ಲವು ಮಣ್ಣಿನಿಂದಾದವು. ಎಲ್ಲವೂ ಮಣ್ಣಿಗೆ ಪುನಃ ಸೇರುವವು.
21 ಮನುಷ್ಯನ ಆತ್ಮವು ಮೇಲಕ್ಕೆ ಏರುತ್ತದೋ, ಪಶುವಿನ ಆತ್ಮವು ಕೆಳಕ್ಕೆ ಇಳಿದು ಭೂಮಿಗೆ ಸೇರುತ್ತದೋ ಯಾರಿಗೆ ಗೊತ್ತು?
ಪ್ರಸ 3 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019