Text copied!
Bibles in Kannada

ನ್ಯಾಯ 19:15-22 in Kannada

Help us?

ನ್ಯಾಯ 19:15-22 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅವರು ಇಳಿದುಕೊಳ್ಳುವುದಕ್ಕೋಸ್ಕರ ಗಿಬೆಯಕ್ಕೆ ಹೋದರು. ಆದರೆ ಯಾರೂ ಅವರನ್ನು ಮನೆಯಲ್ಲಿ ಉಳಿದುಕೊಳ್ಳಲು ಅವಕಾಶಕೊಡದ ಕಾರಣ ಅವರು ಪಟ್ಟಣದ ಮಧ್ಯದಲ್ಲಿ ಕುಳಿತುಕೊಂಡರು.
16 ಅಷ್ಟರಲ್ಲಿ ಎಫ್ರಾಯೀಮಿನ ಪರ್ವತಪ್ರದೇಶಕ್ಕೆ ಸೇರಿದ ಒಬ್ಬ ಮುದುಕನು, ಬೆನ್ಯಾಮೀನ್ಯರ ಊರಾದ ಗಿಬೆಯದಲ್ಲಿ ವಾಸವಾಗಿದ್ದ ಆ ಮುದುಕನು ಸಾಯಂಕಾಲವಾದ್ದರಿಂದ ಕೆಲಸವನ್ನು ಮುಗಿಸಿ ಹೊಲದಿಂದ ಮನೆಗೆ ಬರುತ್ತಿದ್ದನು.
17 ಈ ಮುದುಕನು ಬೀದಿಯಲ್ಲಿ ಕುಳಿತುಕೊಂಡಿದ್ದ ಆ ಪ್ರಯಾಣಿಕನನ್ನು ಕಂಡು, “ನೀನು ಎಲ್ಲಿಂದ ಬಂದೆ? ಎಲ್ಲಿಗೆ ಹೋಗುತ್ತೀ?” ಎಂದು ಕೇಳಲು
18 ಆ ಲೇವಿಯನು ಅವನಿಗೆ, “ನಾವು ಯೆಹೂದದ ಬೇತ್ಲೆಹೇಮಿನಿಂದ ಎಫ್ರಾಯೀಮಿನ ಪರ್ವತಪ್ರದೇಶದ ಒಂದು ದೂರಸ್ಥಳದಲ್ಲಿರುವ ನಮ್ಮ ವಾಸಸ್ಥಳಕ್ಕೆ ಹೋಗುತ್ತಿದ್ದೇವೆ. ನಾನು ಯೆಹೂದದ ಬೇತ್ಲೆಹೇಮಿಗೆ ಹೋಗಿದ್ದೆನು; ಈಗ ತಿರುಗಿ ಯೆಹೋವನ ಮಂದಿರಕ್ಕೆ ಹೋಗುತ್ತೇನೆ. ಇಲ್ಲಿ ಯಾರೂ ನಮ್ಮನ್ನು ತಮ್ಮ ಮನೆಗೆ ಸೇರಿಸಿಕೊಳ್ಳಲಿಲ್ಲ.
19 ನಮ್ಮ ಕತ್ತೆಗಳಿಗೆ ಹುಲ್ಲೂ ಕಾಳೂ ಇವೆ; ನನಗೂ ನಿನ್ನ ಸೇವಕಿಗೂ, ನಿನ್ನ ಸೇವಕನ ಸಂಗಡ ಬಂದಿರುವ ಈ ಪ್ರಾಯಸ್ಥನಿಗೂ ಸಾಕಾಗುವಷ್ಟು ರೊಟ್ಟಿಯೂ, ದ್ರಾಕ್ಷಾರಸವೂ ಇರುತ್ತವೆ. ನಮಗೆ ಹೆಚ್ಚು ಏನೂ ಬೇಕಾಗಿರುವುದಿಲ್ಲ” ಎಂದು ಹೇಳಿದನು.
20 ಆಗ ಆ ಮುದುಕನು, “ನಿನಗೆ ಶುಭವಾಗಲಿ; ನಿನಗೆ ಏನಾದರೂ ಕಡಿಮೆಯಾದರೆ ಅದನ್ನು ನೋಡಿಕೊಳ್ಳುತ್ತೇನೆ;
21 ಈ ರಾತ್ರಿಯನ್ನು ಬೀದಿಯಲ್ಲಿ ಕಳೆಯಬೇಡ, ನನ್ನ ಮನೆಗೆ ಬಾ” ಎಂದು ಹೇಳಿ ಅವನನ್ನು ಕರೆದುಕೊಂಡು ಹೋಗಿ ಅವನ ಕತ್ತೆಗಳಿಗೆ ಮೇವು ಕೊಟ್ಟನು. ಅವರು ತಮ್ಮ ಕೈಕಾಲುಗಳನ್ನು ತೊಳೆದುಕೊಂಡು ಅಲ್ಲಿ ಅನ್ನಪಾನಗಳನ್ನು ತೆಗೆದುಕೊಂಡರು.
22 ಅವರು ಭೋಜನದಿಂದ ತೃಪ್ತಿಪಡುವಷ್ಟರಲ್ಲಿ ಆ ಊರಲ್ಲಿದ್ದ ದುಷ್ಟ ಜನರು ಬಂದು ಆ ಮನೆಯನ್ನು ಸುತ್ತಿಕೊಂಡು, ಬಾಗಿಲನ್ನು ಬಡಿದು, ಮನೆಯ ಯಜಮಾನನಾದ ಮುದುಕನಿಗೆ, “ನಿನ್ನ ಮನೆಗೆ ಬಂದಿರುವಂಥ ಮನುಷ್ಯನನ್ನು ಹೊರಗೆ ಕರೆದುಕೊಂಡು ಬಾ; ಅವನೊಡನೆ ನಾವು ಸಂಗಮಿಸಬೇಕು” ಎಂದು ಕೂಗಿದರು.
ನ್ಯಾಯ 19 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019