4 ಆತನು ನನ್ನನ್ನು ತನ್ನ ರೆಕ್ಕೆಗಳಿಂದ ಹೊದಗಿಸುವನು; ಆತನ ಪಕ್ಕೆಗಳ ಮರೆಯನ್ನು ಆಶ್ರಯಿಸಿಕೊಳ್ಳುವೆ. ಆತನ ಸತ್ಯತೆಯೇ ನನಗೆ ಖೇಡ್ಯವೂ, ಗುರಾಣಿಯೂ ಆಗಿದೆ.
5 ರಾತ್ರಿಯಲ್ಲಿ ಭಯಹುಟ್ಟಿಸುವ ಯಾವುದಕ್ಕೂ, ಹಗಲಲ್ಲಿ ಹಾರಿಬರುವ ಬಾಣಕ್ಕೂ,
6 ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ, ಹಾನಿಕರವಾದ ಮಧ್ಯಾಹ್ನದ ಕೇಡಿಗೂ ಭಯಪಡಬೇಕಾಗಿಲ್ಲ.
7 ನಿನ್ನ ಮಗ್ಗುಲಲ್ಲಿ ಸಾವಿರ ಜನರು, ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರು ಸತ್ತು ಬಿದ್ದರೂ ನಿನಗೇನೂ ತಟ್ಟದು.