Text copied!
Bibles in Kannada

ಕೀರ್ತ 5:1-4 in Kannada

Help us?

ಕೀರ್ತ 5:1-4 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ರಂಧ್ರವಾದ್ಯದೊಡನೆ ಹಾಡತಕ್ಕ ದಾವೀದನ ಕೀರ್ತನೆ. ಯೆಹೋವನೇ ನನ್ನ ಮೊರೆಗೆ ಕಿವಿಗೊಡು; ನನ್ನ ನರಳಾಟವನ್ನು ಲಕ್ಷ್ಯಕ್ಕೆ ತಂದುಕೋ.
2 ನನ್ನ ಅರಸನೇ, ನನ್ನ ದೇವರೇ, ನಿನ್ನನ್ನೇ ಪ್ರಾರ್ಥಿಸುವೆನು; ನನ್ನ ಮೊರೆಯನ್ನು ಆಲಿಸು.
3 ಯೆಹೋವನೇ, ಉದಯಕಾಲದಲ್ಲಿ ನನ್ನ ಸ್ವರವು ನಿನಗೆ ಕೇಳಿಸುವುದು; ಉದಯಕಾಲದಲ್ಲಿಯೇ ನನ್ನ ಪ್ರಾರ್ಥನೆಯನ್ನು ನಿನಗೆ ಸಮರ್ಪಿಸಿ, ನಿನ್ನಿಂದ ಸದುತ್ತರವನ್ನು ಎದುರುನೋಡುತ್ತಿರುವೆನು.
4 ನೀನು ದುಷ್ಟತ್ವದಲ್ಲಿ ಸಂತೋಷಿಸುವ ದೇವರಲ್ಲ; ಕೆಟ್ಟದ್ದು ನಿನ್ನ ಬಳಿಯಲ್ಲಿ ತಂಗಲಾರದು.
ಕೀರ್ತ 5 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019