4 ನನ್ನ ಹೃದಯವು ನೊಂದು ಬೆಂದುಹೋಗಿದೆ; ಮರಣಭಯವು ನನ್ನನ್ನು ಆವರಿಸಿಕೊಂಡಿದೆ.
5 ಅಂಜಿ ನಡುಗುತ್ತಿದ್ದೇನೆ; ದಿಗಿಲು ನನ್ನನ್ನು ಹಿಡಿದಿದೆ.
6 ನಾನು, “ಆಹಾ, ನನಗೆ ರೆಕ್ಕೆಗಳಿದ್ದರೆ ಪಾರಿವಾಳದಂತೆ ಹಾರಿಹೋಗಿ ಆಶ್ರಯ ಸೇರಿಕೊಳ್ಳುತ್ತಿದ್ದೆನು.
7 ಅವಸರದಿಂದ ಹಾನಿಕರವಾದ ಬಿರುಗಾಳಿಯಿಂದ ತಪ್ಪಿಸಿಕೊಂಡು,
8 ದೂರ ಹೋಗಿ ಅರಣ್ಯಸ್ಥಳದಲ್ಲಿ ಪ್ರವಾಸಿಯಾಗಿರುತ್ತಿದ್ದೆನು” ಅಂದುಕೊಂಡೆನು. ಸೆಲಾ
9 ಕರ್ತನೇ, ಅವರ ಭಾಷೆಯನ್ನು ತಾರುಮಾರುಮಾಡಿ ಅವರನ್ನು ಭ್ರಾಂತಿಗೊಳಿಸು. ಪಟ್ಟಣದಲ್ಲಿ ಕಲಹ, ಬಲಾತ್ಕಾರಗಳು ಕಾಣಬರುತ್ತವೆ.
10 ಅವೇ ಅದರ ಪೌಳಿಗೋಡೆಗಳ ಮೇಲೆ ಹಗಲಿರುಳು ಸುತ್ತುತ್ತಿರುವ ಕಾವಲುಗಾರರು; ಊರೊಳಗೆ ಕೇಡು, ತೊಂದರೆಗಳು ಪ್ರಬಲವಾಗಿವೆ.