Text copied!
Bibles in Kannada

ಕೀರ್ತ 49:11-17 in Kannada

Help us?

ಕೀರ್ತ 49:11-17 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಅವರ ಸಮಾಧಿಯೇ ಶಾಶ್ವತಮಂದಿರವು; ತಮ್ಮ ನಿವಾಸಗಳು ತಲತಲಾಂತರಕ್ಕೂ ಇರುವುದೆಂದು ಯೋಚಿಸಿ, ಭೂಮಿಗಳಿಗೆ ತಮ್ಮ ಹೆಸರುಗಳನ್ನು ಕೊಟ್ಟಿದ್ದಾರೆ.
12 ಆದರೂ ಮನುಷ್ಯನು ಎಷ್ಟು ಘನವಾದ ಪದವಿಯಲ್ಲಿದ್ದರೂ ಸ್ಥಿರವಲ್ಲ; ನಾಶವಾಗುವ ಪಶುಗಳಂತೆಯೇ ಇಲ್ಲವಾಗುತ್ತಾನೆ.
13 ಮೂರ್ಖರಿಗೂ ಅವರ ಮಾತಿನಂತೆ ನಡೆಯುವವರಿಗೂ ಇದೇ ಗತಿ. ಸೆಲಾ
14 ಅವರು ಕುರಿಗಳಂತೆ ಪಾತಾಳದಲ್ಲಿ ಸೇರಿಸಲ್ಪಡುವರು; ಮೃತ್ಯುವೇ ಅವರ ಪಾಲಕನು. ಅವರು ನೇರವಾಗಿ ಪಾತಾಳಕ್ಕೆ ಇಳಿದುಹೋಗುವರು, ಅವರಿಗೆ ನಿವಾಸವಿಲ್ಲದ ಹಾಗೆ, ಪಾತಾಳವು ಅವರ ರೂಪವನ್ನು ನಾಶಮಾಡುವುದು.
15 ಆದರೆ ದೇವರು ನನ್ನ ಪ್ರಾಣವನ್ನು ಮೃತ್ಯುಹಸ್ತದಿಂದ ತಪ್ಪಿಸಿ, ನನ್ನನ್ನು ಸ್ವೀಕಾರಮಾಡುವನು. ಸೆಲಾ
16 ಒಬ್ಬನ ಐಶ್ವರ್ಯವೂ, ಗೃಹವೈಭವವೂ ವೃದ್ಧಿಯಾದಾಗ ಕಳವಳಪಡಬೇಡ.
17 ಅವನು ಸಾಯುವಾಗ ಏನೂ ತೆಗೆದುಕೊಂಡು ಹೋಗುವುದಿಲ್ಲ; ಅವನ ವೈಭವವು ಅವನೊಡನೆ ಹೋಗುವುದಿಲ್ಲ.
ಕೀರ್ತ 49 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019