Text copied!
Bibles in Kannada

ಕೀರ್ತ 44:13-19 in Kannada

Help us?

ಕೀರ್ತ 44:13-19 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ನಮ್ಮನ್ನು ನೆರೆಯವರ ನಿಂದೆಗೆ ಗುರಿಮಾಡಿದಿ; ಸುತ್ತಣ ಜನಾಂಗಗಳವರ ಪರಿಹಾಸ್ಯಕ್ಕೂ, ಕುಚೋದ್ಯಕ್ಕೂ ಒಳಪಡಿಸಿದಿ.
14 ನಮ್ಮನ್ನು ಅನ್ಯದೇಶೀಯರ ಗಾದೆಗೆ ಆಸ್ಪದಮಾಡಿದಿ; ಅವರು ನಮ್ಮನ್ನು ನೋಡಿ ತಲೆಯಾಡಿಸುತ್ತಾರೆ.
15 ದೂಷಕರ ನಿಂದಾವಚನಗಳಿಂದಲೂ, ಮುಯ್ಯಿತೀರಿಸುವ ವೈರಿಗಳ ದೃಷ್ಟಿಯಿಂದಲೂ,
16 ನನಗೆ ಉಂಟಾಗಿರುವ ಅವಮಾನವು ಯಾವಾಗಲೂ ನನ್ನ ಮುಂದೆ ಇದೆ; ನಾಚಿಕೆಯು ನನ್ನ ಮುಖವನ್ನು ಮುಚ್ಚಿದೆ.
17 ನಾವು ನಿನ್ನನ್ನು ಮರೆಯದೆಯೂ, ನಿನ್ನ ನಿಬಂಧನೆಗಳನ್ನು ಮೀರದೆಯೂ ಇದ್ದರೂ; ಇದೆಲ್ಲಾ ನಮ್ಮ ಮೇಲೆ ಬಂದಿದೆಯಲ್ಲಾ!
18 ನಮ್ಮ ಹೃದಯವು ಹಿಂದಿರುಗಲಿಲ್ಲ; ನಮ್ಮ ಹೆಜ್ಜೆಗಳು ನಿನ್ನ ದಾರಿಯಿಂದ ತೊಲಗಲಿಲ್ಲ.
19 ಆದರೂ ನೀನು ನಮ್ಮನ್ನು ಅಪಜಯಪಡಿಸಿ ನರಿಗಳಿರುವ ಕಾಡನ್ನಾಗಿ ಮಾಡಿದ್ದೇಕೆ? ಮರಣದ ನೆರಳು ನಮ್ಮನ್ನು ಕವಿಯುವಂತೆ ಮಾಡಿದ್ದೇಕೆ?
ಕೀರ್ತ 44 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019