Text copied!
Bibles in Kannada

ಅ. ಕೃ. 10:15-26 in Kannada

Help us?

ಅ. ಕೃ. 10:15-26 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಅದಕ್ಕೆ; “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದೆಂದು” ಪುನಃ ಎರಡನೆಯ ಸಾರಿ ಅವನಿಗೆ ವಾಣಿ ಕೇಳಿಸಿತು.
16 ಹೀಗೆ ಮೂರು ಸಾರಿ ಆಯಿತು. ಆದ ಮೇಲೆ ಆ ವಸ್ತುವು ಆಕಾಶದೊಳಗೆ ಸೇರಿಕೊಂಡಿತು.
17 ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ, ಆಗೋ, ಕೊರ್ನೆಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವುದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು;
18 ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು.
19 ಪೇತ್ರನು ಆ ದರ್ಶನದ ಕುರಿತಾಗಿ ಯೋಚನೆ ಮಾಡುತ್ತಿರಲು ದೇವರಾತ್ಮನು ಅವನಿಗೆ; “ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ;
20 ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು; ನಾನೇ ಅವರನ್ನು ಕಳುಹಿಸಿದ್ದೇನೆ” ಎಂದು ಹೇಳಿದನು.
21 ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಬಂದು; “ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು?” ಎಂದು ಕೇಳಲು,
22 ಅವರು; “ಕೊರ್ನೆಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ, ದೇವರಿಗೆ ಭಯಪಡುವವನೂ, ಯೆಹೂದ್ಯ ಜನರೆಲ್ಲರಿಂದ ಒಳ್ಳೆಯ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನಿನ್ನಿಂದ ಸುವಾರ್ತೆಯನ್ನು ಕೇಳಬೇಕೆಂದು ಪರಿಶುದ್ಧ ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದ್ದಾನೆ” ಎಂದು ಹೇಳಿದರು.
23 ಪೇತ್ರನು ಇದನ್ನು ಕೇಳಿ ಅವರನ್ನು ಒಳಕ್ಕೆ ಕರೆದು ಉಪಚರಿಸಿದನು. ಮರುದಿನ ಅವನು ಎದ್ದು ಅವರ ಜೊತೆಯಲ್ಲಿ ಹೊರಟನು; ಯೊಪ್ಪ ಪಟ್ಟಣದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು.
24 ಮರುದಿನ ಅವನು ಕೈಸರೈಯಕ್ಕೆ ಬಂದು ಸೇರಿದನು. ಕೊರ್ನೆಲ್ಯನು ತನ್ನ ಬಂಧುಬಳಗದವರನ್ನೂ ಮತ್ತು ಅಪ್ತಮಿತ್ರರನ್ನೂ ಕರೆಯಿಸಿ ಪೇತ್ರನಿಗಾಗಿ ಎದುರುನೋಡುತ್ತಿದ್ದನು.
25 ಪೇತ್ರನು ಬಂದಾಗ ಕೊರ್ನೆಲ್ಯನು ಅವನನ್ನು ಎದುರುಗೊಂಡು ಅವನ ಪಾದಕ್ಕೆ ಬಿದ್ದು ನಮಸ್ಕಾರ ಮಾಡಿದನು.
26 ಆದರೆ ಪೇತ್ರನು; “ಏಳು, ನಾನೂ ಸಹಾ ಮನುಷ್ಯನೇ” ಎಂದು ಹೇಳಿ, ಅವನನ್ನು ಎತ್ತಿ,
ಅ. ಕೃ. 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019