Text copied!
Bibles in Kannada

ಅ. ಕೃ. 10:13-23 in Kannada

Help us?

ಅ. ಕೃ. 10:13-23 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 ಆಗ; “ಪೇತ್ರನೇ, ಎದ್ದು, ಕೊಯ್ದು ತಿನ್ನು” ಎಂದು ಅವನಿಗೆ ಒಂದು ವಾಣಿ ಕೇಳಿಸಿತು.
14 ಅದಕ್ಕೆ ಪೇತ್ರನು; “ಬೇಡವೇ ಬೇಡ ಕರ್ತನೇ, ನಾನು ಎಂದೂ ಹೊಲೆ ಪದಾರ್ಥವನ್ನಾಗಲಿ, ಅಶುದ್ಧವಾದವುಗಳನ್ನಾಗಲಿ ತಿಂದವನಲ್ಲ” ಅಂದನು.
15 ಅದಕ್ಕೆ; “ದೇವರು ಶುದ್ಧಮಾಡಿದ್ದನ್ನು ನೀನು ಹೊಲೆ ಎನ್ನಬಾರದೆಂದು” ಪುನಃ ಎರಡನೆಯ ಸಾರಿ ಅವನಿಗೆ ವಾಣಿ ಕೇಳಿಸಿತು.
16 ಹೀಗೆ ಮೂರು ಸಾರಿ ಆಯಿತು. ಆದ ಮೇಲೆ ಆ ವಸ್ತುವು ಆಕಾಶದೊಳಗೆ ಸೇರಿಕೊಂಡಿತು.
17 ಪೇತ್ರನು ತನಗಾದ ದರ್ಶನವು ಏನಾಗಿರಬಹುದೆಂದು ತನ್ನಲ್ಲಿ ಕಳವಳ ಪಡುತ್ತಿರುವಾಗಲೇ, ಆಗೋ, ಕೊರ್ನೆಲ್ಯನು ಕಳುಹಿಸಿದ್ದ ಆ ಮನುಷ್ಯರು ಸೀಮೋನನ ಮನೆ ಯಾವುದು ಎಂದು ಕೇಳಿಕೊಂಡು ಬಂದು ಆ ಮನೆಯ ಬಾಗಿಲಲ್ಲಿ ನಿಂತು;
18 ಪೇತ್ರನೆನಿಸಿಕೊಳ್ಳುವ ಸೀಮೋನನು ಇಲ್ಲಿ ಇಳುಕೊಂಡಿದ್ದಾನೋ ಎಂದು ಕೂಗಿ ಕೇಳಿದರು.
19 ಪೇತ್ರನು ಆ ದರ್ಶನದ ಕುರಿತಾಗಿ ಯೋಚನೆ ಮಾಡುತ್ತಿರಲು ದೇವರಾತ್ಮನು ಅವನಿಗೆ; “ಅಗೋ, ಮೂವರು ಮನುಷ್ಯರು ನಿನ್ನನ್ನು ವಿಚಾರಿಸುತ್ತಾರೆ;
20 ನೀನೆದ್ದು ಕೆಳಗಿಳಿದು ಏನೂ ಸಂಶಯಪಡದೆ ಅವರ ಜೊತೆಯಲ್ಲಿ ಹೋಗು; ನಾನೇ ಅವರನ್ನು ಕಳುಹಿಸಿದ್ದೇನೆ” ಎಂದು ಹೇಳಿದನು.
21 ಪೇತ್ರನು ಕೆಳಗಿಳಿದು ಆ ಮನುಷ್ಯರ ಬಳಿಗೆ ಬಂದು; “ಇಗೋ, ನೀವು ವಿಚಾರಿಸುವವನು ನಾನೇ; ನೀವು ಬಂದ ಕಾರಣವೇನು?” ಎಂದು ಕೇಳಲು,
22 ಅವರು; “ಕೊರ್ನೆಲ್ಯನೆಂಬ ಒಬ್ಬ ಶತಾಧಿಪತಿ ಇದ್ದಾನೆ. ಅವನು ನೀತಿವಂತನೂ, ದೇವರಿಗೆ ಭಯಪಡುವವನೂ, ಯೆಹೂದ್ಯ ಜನರೆಲ್ಲರಿಂದ ಒಳ್ಳೆಯ ಹೆಸರು ಹೊಂದಿದವನೂ ಆಗಿದ್ದಾನೆ; ನಿನ್ನನ್ನು ತನ್ನ ಮನೆಗೆ ಆಹ್ವಾನಿಸಿ ನಿನ್ನಿಂದ ಸುವಾರ್ತೆಯನ್ನು ಕೇಳಬೇಕೆಂದು ಪರಿಶುದ್ಧ ದೇವದೂತನ ಮುಖಾಂತರವಾಗಿ ಅಪ್ಪಣೆ ಹೊಂದಿದ್ದಾನೆ” ಎಂದು ಹೇಳಿದರು.
23 ಪೇತ್ರನು ಇದನ್ನು ಕೇಳಿ ಅವರನ್ನು ಒಳಕ್ಕೆ ಕರೆದು ಉಪಚರಿಸಿದನು. ಮರುದಿನ ಅವನು ಎದ್ದು ಅವರ ಜೊತೆಯಲ್ಲಿ ಹೊರಟನು; ಯೊಪ್ಪ ಪಟ್ಟಣದ ಸಹೋದರರಲ್ಲಿ ಕೆಲವರು ಅವನ ಕೂಡ ಹೋದರು.
ಅ. ಕೃ. 10 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019