Text copied!
Bibles in Kannada

ಅರಣ್ಯ 26:6-27 in Kannada

Help us?

ಅರಣ್ಯ 26:6-27 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

6 ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರು, ಕರ್ಮೀಯ ವಂಶಸ್ಥರಾದ ಕರ್ಮೀಯರು ಇವರೇ.
7 ಇವೇ ರೂಬೇನ್ಯರ ಕುಟುಂಬದವರು, ಇವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 43,730 ಮಂದಿ.
8 ಪಲ್ಲೂವಿನ ಮಗನು ಎಲೀಯಾಬ್.
9 ಎಲೀಯಾಬನ ಮಕ್ಕಳು: ನೆಮೂವೇಲ್, ದಾತಾನ್, ಅಬೀರಾಮ್ ಎಂಬುವವರೇ. ಕೋರಹನ ಗುಂಪಿನವರು ಯೆಹೋವನಿಗೆ ವಿರುದ್ಧವಾಗಿ ವಿವಾದಿಸಿದ ಕಾಲದಲ್ಲಿ ಅವರೊಳಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧವಾಗಿ ವಿವಾದಿಸಿದ ಆಲೋಚನಾಕರ್ತರಾದ ದಾತಾನ್ ಮತ್ತು ಅಬೀರಾಮರು ಇವರೇ.
10 ಭೂಮಿಯು ಬಾಯ್ದೆರೆದು ಅವರನ್ನೂ ಮತ್ತು ಕೋರಹನನ್ನೂ ನುಂಗಿಬಿಟ್ಟಿತು ಮತ್ತು ಬೆಂಕಿಯು ಆ ಗುಂಪಿನವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ದಹಿಸಿ ಇಸ್ರಾಯೇಲರಿಗೆ ಎಚ್ಚರಿಕೆಯನ್ನು ಉಂಟುಮಾಡಿತು.
11 ಆ ಗುಂಪಿನವರೆಲ್ಲರು ಸತ್ತರೂ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
12 ಸಿಮೆಯೋನ್ ಕುಲದ ಕುಟುಂಬಗಳು ಯಾವುವೆಂದರೆ: ನೆಮೂವೇಲನ ವಂಶಸ್ಥರಾದ ನೆಮೂವೇಲ್ಯರು, ಯಾಮೀನನ ವಂಶಸ್ಥರಾದ ಯಾಮೀನ್ಯರು, ಯಾಕೀನನ ವಂಶಸ್ಥರಾದ ಯಾಕೀನ್ಯರು,
13 ಜೆರಹನ ವಂಶಸ್ಥರಾದ ಜೆರಹಿಯರು, ಸೌಲನ ವಂಶಸ್ಥರಾದ ಸೌಲ್ಯರು ಇವರೇ.
14 ಸಿಮೆಯೋನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 22,200 ಮಂದಿ.
15 ಗಾದ್ ಕುಲದ ಕುಟುಂಬಗಳು ಯಾವುವೆಂದರೆ: ಚೆಫೋನನ ವಂಶಸ್ಥರಾದ ಚೆಫೋನ್ಯರು, ಹಗ್ಗೀಯ ವಂಶಸ್ಥರಾದ ಹಗ್ಗೀಯರು, ಶೂನೀಯ ವಂಶಸ್ಥರಾದ ಶೂನೀಯರು,
16 ಒಜ್ನೀಯ ವಂಶಸ್ಥರಾದ ಒಜ್ನೀಯರು, ಏರೀಯ ವಂಶಸ್ಥರಾದ ಏರೀಯರು,
17 ಅರೋದನ ವಂಶಸ್ಥರಾದ ಅರೋದ್ಯರು, ಅರೇಲೀಯ ವಂಶಸ್ಥರಾದ ಅರೇಲೀಯರು ಇವರೇ.
18 ಗಾದ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 40,500 ಮಂದಿ.
19 ಯೆಹೂದನ ಮಕ್ಕಳಲ್ಲಿ ಏರ್ ಮತ್ತು ಓನಾನರು ಕಾನಾನ್ ದೇಶದಲ್ಲೇ ಸತ್ತರು.
20 ಯೆಹೂದನ ಕುಲದಲ್ಲಿ ಉಳಿದ ಕುಟುಂಬಗಳು ಯಾವುವೆಂದರೆ: ಶೇಲಹನ ವಂಶಸ್ಥರಾದ ಶೇಲಾನ್ಯರು, ಪೆರೆಹನ ವಂಶಸ್ಥರಾದ ಪೆರೆಚ್ಯರು, ಜೆರಹನ ವಂಶಸ್ಥರಾದ ಜೆರಹಿಯರು ಇವರೇ.
21 ಪೆರೆಚನಿಂದುಂಟಾದ ಕುಟುಂಬಗಳು: ಹೆಚ್ರೋನನ ವಂಶಸ್ಥರಾದ ಹೆಚ್ರೋನ್ಯರೂ ಹಾಮೂಲನ ವಂಶಸ್ಥರಾದ ಹಾಮೂಲ್ಯರೂ.
22 ಯೆಹೂದ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 76,500 ಮಂದಿ.
23 ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ: ತೋಲನ ವಂಶಸ್ಥರಾದ ತೋಲಾಯರು, ಪುವ್ವನ ವಂಶಸ್ಥರಾದ ಪೂನ್ಯರು,
24 ಯಾಶೂಬನ ವಂಶಸ್ಥರಾದ ಯಾಶೂಬ್ಯರು, ಶಿಮ್ರೋನನ ವಂಶಸ್ಥರಾದ ಶಿಮ್ರೋನ್ಯರು ಇವರೇ.
25 ಇಸ್ಸಾಕಾರ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 64,300 ಮಂದಿ.
26 ಜೆಬುಲೂನ್ ಕುಲದ ಕುಟುಂಬಗಳು ಯಾವುವೆಂದರೆ: ಸೆರೆದನ ವಂಶಸ್ಥರಾದ ಸೆರೆದ್ಯರು, ಏಲೋನನ ವಂಶಸ್ಥರಾದ ಏಲೋನ್ಯರು, ಯಹಲೇಲನ ವಂಶಸ್ಥರಾದ ಯಹಲೇಲ್ಯರು.
27 ಜೆಬುಲೂನ್ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಒಟ್ಟು ಸಂಖ್ಯೆ - 60,500 ಮಂದಿ.
ಅರಣ್ಯ 26 in ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019