Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - 2 ಅರಸು - 2 ಅರಸು 12

2 ಅರಸು 12:9-13

Help us?
Click on verse(s) to share them!
9ಯಾಜಕನಾದ ಯೆಹೋಯಾದಾವನು ಒಂದು ಪೆಟ್ಟಿಗೆಯನ್ನು ತೆಗೆದುಕೊಂಡು ಬಂದು ಅದರ ಮುಚ್ಚಳದಲ್ಲಿ ತೂತು ಮಾಡಿ, ಅದನ್ನು ಯೆಹೋವನ ಆಲಯದ ಬಾಗಿಲಿನ ಬಲಗಡೆಯಲ್ಲಿ ಯಜ್ಞವೇದಿಯ ಹತ್ತಿರ ಇಟ್ಟನು. ದ್ವಾರಪಾಲಕರಾದ ಯಾಜಕರು ಯೆಹೋವನ ಆಲಯಕ್ಕೆ ತರಲ್ಪಟ್ಟ ಹಣವನ್ನೆಲ್ಲಾ ಅದರಲ್ಲಿಯೇ ಹಾಕಿಸುತ್ತಿದ್ದರು.
10ಯೆಹೋವನ ಆಲಯದ ಪೆಟ್ಟಿಗೆಯಲ್ಲಿ ಬೇಕಾದಷ್ಟು ಹಣ ಇದೆಯೆಂದು ಕಂಡು ಬಂದಾಗೆಲ್ಲಾ, ರಾಜಲೇಖಕನೂ, ಮಹಾಯಾಜಕನೂ ಬಂದು ಅದನ್ನು ಎಣಿಸಿ ಚೀಲಗಳಲ್ಲಿ ಕಟ್ಟಿ ಇಡುವರು.
11ಅವರು ತೂಕಮಾಡಿ ಎಣಿಸಿದ ಹಣವನ್ನು, ಯೆಹೋವನ ಆಲಯದ ಕೆಲಸವನ್ನು ನಡಿಸುವ ಮುಖ್ಯಸ್ಥರಿಗೆ ಒಪ್ಪಿಸುವರು. ಅವರು ಅದನ್ನು ಅಲ್ಲಿ ಕೆಲಸ ಮಾಡುವ ಬಡಗಿ, ಶಿಲ್ಪಿ, ಮೇಸ್ತ್ರಿ, ಕಲ್ಲುಕುಟಿಕ ಇವರ ಸಂಬಳಕ್ಕಾಗಿಯೂ.
12ಮರ, ಕೆತ್ತಿದ ಕಲ್ಲುಗಳನ್ನು ಕೊಂಡುಕೊಳ್ಳುವುದಕ್ಕೂ, ಆಲಯವನ್ನು ದುರಸ್ತಿ ಮಾಡಲು ಬೇಕಾದ ಎಲ್ಲಾ ವೆಚ್ಚಕ್ಕಾಗಿಯೂ ಉಪಯೋಗಿಸಿದರು.
13ಯೆಹೋವನ ಆಲಯದೊಳಗೆ ತಂದ ಹಣದಿಂದ ಬೆಳ್ಳಿಯ ಬಟ್ಟಲುಗಳನ್ನು, ಕತ್ತರಿಗಳನ್ನು, ಬೋಗುಣಿಗಳನ್ನು, ತುತ್ತೂರಿಗಳನ್ನೂ, ಬೆಳ್ಳಿ ಬಂಗಾರದ ಪಾತ್ರೆ ಇವುಗಳನ್ನು ಮಾಡುವುದಕ್ಕಾಗಿ ಉಪಯೋಗಿಸುತ್ತಿರಲಿಲ್ಲ.

Read 2 ಅರಸು 122 ಅರಸು 12
Compare 2 ಅರಸು 12:9-132 ಅರಸು 12:9-13