Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ರೋಮಾ - ರೋಮಾ 11

ರೋಮಾ 11:8-24

Help us?
Click on verse(s) to share them!
8“ದೇವರು ಅವರಿಗೆ ಮಂದಬುದ್ಧಿಯ ಆತ್ಮನನ್ನು, ಅಂದರೆ ಕಾಣದ ಕಣ್ಣುಗಳನ್ನೂ, ಕೇಳದ ಕಿವಿಗಳನ್ನೂ ಕೊಟ್ಟನು. ಈ ಭಾವವು ಈ ಹೊತ್ತಿನವರೆಗೂ ಹಾಗೆಯೇ ಇದೆ” ಎಂದು ಬರೆದ ಪ್ರಕಾರ ಅವರಿಗೆ ಆಯಿತು.
9ಇದಲ್ಲದೆ “ಅವರ ಭೋಜನವೇ ಅವರಿಗೆ ಬಲೆಯೂ, ಜಾಲವೂ, ಅಡೆತಡೆಯೂ, ಪ್ರತಿಕಾರವೂ ಆಗಲಿ;
10ಅವರ ಕಣ್ಣು ಮೊಬ್ಬಾಗಿ ಕಾಣದೆಹೋಗಲಿ ಅವರ ಬೆನ್ನು ಯಾವಾಗಲೂ ಬೊಗ್ಗಿಕೊಂಡಿರುವಂತೆ ಮಾಡು” ಎಂದು ದಾವೀದನು ಹೇಳುತ್ತಾನೆ.
11ಹಾಗಾದರೆ “ಅವರು ಬಿದ್ದೇಹೋಗುವಂತೆ ಎಡವಿದರೇನು” ಎಂದು ಕೇಳುತ್ತೇನೆ. ಹಾಗೆ ಎಂದಿಗೂ ಆಗಬಾರದು ಅವರು ಬಿದ್ದುಹೋದದ್ದರಿಂದ ಕ್ರಿಸ್ತನಿಂದ ಉಂಟಾಗುವ ರಕ್ಷಣೆಯು ಅನ್ಯಜನರಿಗೆ ಉಂಟಾಯಿತು. ಇದರಿಂದ ದೇವರು ಅವರಲ್ಲಿ ಅಸೂಯೆ ಹುಟ್ಟಿಸುತ್ತಾನೆ.
12ಅವರು ಬಿದ್ದುಹೋದದ್ದು ಸರ್ವಲೋಕದ ಸೌಭಾಗ್ಯಕ್ಕೂ, ಅವರು ಸೋತುಹೋದದ್ದು ಅನ್ಯಜನಗಳ ಸಂಪತ್ತಿಗೂ ಮಾರ್ಗವಾಗಿರಲಾಗಿ ಅವರ ಪೂರ್ಣ ಪುನಃಸ್ಥಾಪನೆಯು ಪ್ರಪಂಚಕ್ಕೆ ಎಷ್ಟೋ ಹೆಚ್ಚಾದ ಭಾಗ್ಯಕ್ಕೆ ಕಾರಣವಾಗುವುದು.
13ಅನ್ಯಜನರಾಗಿರುವ ನಿಮಗೆ ನಾನು ಹೇಳುವುದೇನಂದರೆ, ನಾನು ಅನ್ಯಜನರಿಗೆ ಅಪೊಸ್ತಲನಾಗಿರಲಾಗಿ ನನ್ನ ಸೇವೆಯ ಬಗ್ಗೆ ಹೊಗಳಿಕೊಳ್ಳುತ್ತಿದ್ದೇನೆ.
14ಇದರಿಂದಾಗಿ ಸ್ವಜನರಲ್ಲಿ ಅಸೂಯೆಯನ್ನು ಕೆರಳಿಸಿ ಅವರಲ್ಲಿ ಕೆಲವರನ್ನು ರಕ್ಷಣೆಯ ಮಾರ್ಗಕ್ಕೆ ತಂದೇನು.
15ಯಾಕೆಂದರೆ ಇಸ್ರಾಯೇಲ್ಯರನ್ನು ನಿರಾಕರಿಸುವುದರಿಂದ ಲೋಕವು ದೇವರ ಸಂಗಡ ಸಂಧಾನವಾಗುವುದಕ್ಕೆ ಮಾರ್ಗವಾದ ಮೇಲೆ ಅವರನ್ನು ಸೇರಿಸಿಕೊಳ್ಳುವುದರಿಂದ ಏನಾಗುವುದು? ಸತ್ತವರು ಜೀವಿತರಾಗಿ ಎದ್ದುಬಂದತಾಗುವುದಿಲ್ಲವೇ.
16ಕಣಕದಲ್ಲಿ ಪ್ರಥಮಫಲವನ್ನು ದೇವರಿಗರ್ಪಿಸಿದ ಮೇಲೆ ಕಣಕವೆಲ್ಲಾ ಪವಿತ್ರವಾಯಿತು. ಬೇರು ಶುದ್ಧವಾಗಿದ್ದ ಮೇಲೆ ಕೊಂಬೆಗಳೂ ಹಾಗೆಯೇ.
17ಆದರೆ ಕೆಲವು ಕೊಂಬೆಗಳನ್ನು ಮುರಿದುಹಾಕಿ ಕಾಡೆಣ್ಣೆ ಮರದಂತಿರುವ ನಿನ್ನನ್ನು ಅವುಗಳ ಜಾಗದಲ್ಲಿ ಕಸಿಮಾಡಿರಲಾಗಿ ಊರೆಣ್ಣೇಮರದ ರಸವತ್ತಾದ ಬೇರಿನಲ್ಲಿ ಅದು ಪಾಲುಹೊಂದಿದ್ದರೂ ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಅಂಟಿಸಿದ ಮೇಲೆ ನೀನು ಕೊಂಬೆಯ ಕುರಿತು ಹೆಚ್ಚಿಸಿಕೊಳ್ಳಬೇಡ.
18ಹೆಚ್ಚಿಸಿಕೊಂಡರೂ ಆ ಬೇರಿಗೆ ನೀನು ಆಧಾರವಲ್ಲ. ಅದು ನಿನಗೆ ಆಧಾರವಾಗಿದೆ.
19ಈ ಮಾತಿಗೆ, “ನನ್ನನ್ನು ಕಸಿಮಾಡುವುದಕ್ಕಾಗಿ ಕೊಂಬೆಗಳು ಮುರಿದುಹಾಕಲ್ಪಟ್ಟವಲ್ಲಾ” ಎಂದು ನೀನು ಒಂದು ವೇಳೆ ಹೇಳಬಹುದು.
20ನೀನು ಹೇಳುವುದು ನಿಜ. ಅವರು ನಂಬದೇ ಹೋದ್ದದರಿಂದ ಮುರಿದುಹಾಕಲ್ಪಟ್ಟರು. ನೀನು ನಿಂತಿರುವುದು ನಂಬಿಕೆಯಿಂದಲೇ.
21ಗರ್ವಪಡಬೇಡ, ಭಯದಿಂದಿರು. ದೇವರು ಹುಟ್ಟುಕೊಂಬೆಗಳನ್ನು ಉಳಿಸದೆ ಇದ್ದ ಮೇಲೆ ನಿನ್ನನ್ನೂ ಉಳಿಸುವುದಿಲ್ಲ.
22ಆದ್ದರಿಂದ ದೇವರ ದಯೆಯನ್ನೂ, ದಂಡನೆಯನ್ನು ನೋಡು; ಬಿದ್ದವರಿಗೆ ದಂಡನೆಯನ್ನೂ, ನೀನು ದೇವರ ದಯೆಯನ್ನು ಆಶ್ರಯಿಸಿಕೊಂಡೇ ಇದ್ದರೆ ಆತನ ದಯೆಯನ್ನು ಹೊಂದುವಿ. ಇಲ್ಲವಾದರೆ ನಿನ್ನನ್ನೂ ಕಡಿದುಹಾಕುವನು.
23ಇಸ್ರಾಯೇಲ್ಯರ ಕೂಡ ಇನ್ನು ಅಪನಂಬಿಕೆಯಲ್ಲಿ ನಿಲ್ಲದ ಪಕ್ಷಕ್ಕೆ ಅವರನ್ನೂ ಕಸಿಮಾಡುವನು. ದೇವರು ಅವರನ್ನು ತಿರುಗಿ ಕಸಿಕಟ್ಟುವುದಕ್ಕೆ ಸಮರ್ಥನಾಗಿದ್ದಾನೆ.
24ನೀನು ಹುಟ್ಟು ಕಾಡುಮರದಿಂದ ಕಡಿದು ತೆಗೆಯಲ್ಪಟ್ಟು ನಿನಗೆ ಸಂಬಂಧಪಡದ ಊರು ಮರದಲ್ಲಿ ಕಸಿಕಟ್ಟಿಸಿಕೊಂಡವನಾದ ಮೇಲೆ ಅದರಲ್ಲಿ ಹುಟ್ಟಿದ ಕೊಂಬೆಗಳಾಗಿರುವ ಅವರು ಸ್ವಂತ ಮರದಲ್ಲಿ ಕಸಿಕಟ್ಟಲ್ಪಡುವುದು ಎಷ್ಟೋ ಯುಕ್ತವಾಗಿದೆಯಲ್ಲವೇ.

Read ರೋಮಾ 11ರೋಮಾ 11
Compare ರೋಮಾ 11:8-24ರೋಮಾ 11:8-24