Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 26

ಯಾಜ 26:8-14

Help us?
Click on verse(s) to share them!
8ನಿಮ್ಮಲ್ಲಿ ಐದು ಜನರು ನೂರು ಜನರನ್ನೂ ಮತ್ತು ನೂರು ಜನರು ಹತ್ತು ಸಾವಿರ ಜನರನ್ನೂ ಓಡಿಸುವರು; ನಿಮ್ಮ ಶತ್ರುಗಳು ನಿಮ್ಮ ಕತ್ತಿಯಿಂದ ಹತರಾಗುವರು.
9ನಾನು ನಿಮ್ಮ ಮೇಲೆ ಕಟಾಕ್ಷವಿಟ್ಟು ಬಹುಸಂತಾನವನ್ನು ಕೊಟ್ಟು ಹೆಚ್ಚಿಸುವೆನು; ನಿಮ್ಮೊಂದಿಗೆ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.
10ನೀವು ಬಹುದಿನದಿಂದ ಇಟ್ಟುಕೊಂಡಿರುವ ಹಳೆಯ ಧಾನ್ಯವನ್ನು ಊಟಮಾಡುವಿರಿ; ಹೊಸದಕ್ಕೆ ಸ್ಥಳ ಉಂಟಾಗುವಂತೆ ಹಳೆಯದನ್ನು ತೆಗೆಯುವಿರಿ.
11ನಾನು ನಿಮ್ಮ ನಡುವೆ ವಾಸಮಾಡುವೆನು; ನಿಮ್ಮನ್ನು ತಳ್ಳಿಬಿಡುವುದಿಲ್ಲ.
12ನಿಮ್ಮ ನಡುವೆ ತಿರುಗಾಡುತ್ತಾ ನಿಮಗೆ ದೇವರಾಗಿರುವೆನು, ನೀವು ನನಗೆ ಪ್ರಜೆಯಾಗಿರುವಿರಿ.
13ನೀವು ಐಗುಪ್ತ್ಯರಿಗೆ ಗುಲಾಮರಾಗಿರಬಾರದೆಂದು ನಿಮ್ಮನ್ನು ಅವರ ದೇಶದೊಳಗಿಂದ ಬರಮಾಡಿದ ನಿಮ್ಮ ದೇವರಾದ ಯೆಹೋವನು ನಾನೇ; ನಿಮ್ಮನ್ನು ಕುಗ್ಗಿಸಿದ ನೊಗವನ್ನು ಮುರಿದು ನೀವು ನೆಟ್ಟಗೆ ನಿಂತು ನಡೆಯುವಂತೆ ಮಾಡಿದವನು ನಾನು.
14“ಆದರೆ ನೀವು ನನ್ನ ಮಾತನ್ನು ಕೇಳದೆ ಈ ಆಜ್ಞೆಗಳನ್ನೆಲ್ಲಾ ಅನುಸರಿಸದೆ,

Read ಯಾಜ 26ಯಾಜ 26
Compare ಯಾಜ 26:8-14ಯಾಜ 26:8-14