Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಯಾಜ - ಯಾಜ 22

ಯಾಜ 22:3-8

Help us?
Click on verse(s) to share them!
3ಅವರಿಗೆ ನೀನು ಹೀಗೆ ಆಜ್ಞಾಪಿಸಬೇಕು, ‘ನಿಮ್ಮಲ್ಲಿಯಾಗಲಿ ಅಥವಾ ನಿಮ್ಮ ಸಂತತಿಯವರಲ್ಲಾಗಲಿ ಯಾವನಾದರೂ ಅಶುದ್ಧನಾಗಿರುವಾಗ ಇಸ್ರಾಯೇಲರು ಯೆಹೋವನಿಗೆ ಮೀಸಲೆಂದು ಸಮರ್ಪಿಸುವ ದ್ರವ್ಯಗಳ ಬಳಿಗೆ ಬಂದರೆ, ಅವನು ನನ್ನ ಸಾನ್ನಿಧ್ಯಸೇವೆಯಿಂದ ತೆಗೆದು ಹಾಕಬೇಕು; ನಾನು ಯೆಹೋವನು.
4ಆರೋನನ ಸಂತತಿಯವರಲ್ಲಿ ಯಾವನಿಗಾದರೂ ಕುಷ್ಠರೋಗವಾಗಲಿ ಅಥವಾ ಮೇಹವಾಗಲಿ ಇದ್ದರೆ ಅವನು ಶುದ್ಧನಾಗುವ ತನಕ ದೇವರಿಗೆ ನೈವೇದ್ಯವಾದ ಪದಾರ್ಥಗಳನ್ನು ಊಟಮಾಡಬಾರದು. ಹೆಣದ ಸಂಪರ್ಕದಿಂದ ಅಶುದ್ಧವಾದುದನ್ನು ಮುಟ್ಟಿದವನಾಗಲಿ, ವೀರ್ಯಸ್ಖಲನ ಮಾಡಿಕೊಂಡವನಾಗಲಿ,
5ಹರಿದಾಡುವ ಅಶುದ್ಧವಾದ ಕ್ರಿಮಿಕೀಟ ಅಥವಾ ಅಶುದ್ಧನಾದ ಮನುಷ್ಯನನ್ನು ಮುಟ್ಟಿದವನು ಅಶುದ್ಧನಾಗಿರುವನು.
6“‘ಅಶುದ್ಧವಾದುದನ್ನು ಮುಟ್ಟುವ ಯಾಜಕನು ಆ ದಿನದ ಸಾಯಂಕಾಲದ ವರೆಗೆ ಅಶುದ್ಧನಾಗಿರುವನು. ಆದುದರಿಂದ ಸ್ನಾನಮಾಡುವ ತನಕ ಅವನು ನೈವೇದ್ಯದ್ರವ್ಯವನ್ನು ತಿನ್ನಬಾರದು.
7ಹೊತ್ತುಮುಣುಗಿದ ನಂತರ ಅವನು ಶುದ್ಧನಾಗಿ ನೈವೇದ್ಯದ್ರವ್ಯವನ್ನು ಊಟಮಾಡಬಹುದು. ಅದು ಅವನ ಆಹಾರವೇ.
8ಅವನು ತಾನಾಗಿ ಸತ್ತುಬಿದ್ದದ್ದನ್ನಾಗಲಿ, ಕಾಡುಮೃಗದಿಂದ ಕೊಲ್ಲಲ್ಪಟ್ಟ ಪ್ರಾಣಿಗಳನ್ನು ತಿಂದು ತನ್ನನ್ನು ಅಪವಿತ್ರಮಾಡಿಕೊಳ್ಳಬಾರದು; ನಾನು ಯೆಹೋವನು.

Read ಯಾಜ 22ಯಾಜ 22
Compare ಯಾಜ 22:3-8ಯಾಜ 22:3-8