Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಪ.ಗೀ. - ಪ.ಗೀ. 1

ಪ.ಗೀ. 1:5-16

Help us?
Click on verse(s) to share them!
5ಯೆರೂಸಲೇಮಿನ ಮಹಿಳೆಯರೇ, ನಾನು ಕೇದಾರಿನ ಗುಡಾರಗಳಂತೆ ಕಪ್ಪಾಗಿದ್ದರೂ, ಸೊಲೊಮೋನನ ಪರದೆಗಳಂತೆ ಚೆಲುವಾಗಿದ್ದೇನೆ.
6ನಾನು ಕಪ್ಪಾಗಿದ್ದೇನೆ ಎಂದು ನನ್ನನ್ನು ದಿಟ್ಟಿಸಿ ನೋಡಬೇಡಿರಿ. ನಾನು ಕಪ್ಪಾಗಿರುವುದು ಸೂರ್ಯನ ತಾಪದಿಂದ. ನನ್ನ ಸಹೋದರರು ನನ್ನ ಮೇಲೆ ಕೋಪಗೊಂಡು ದ್ರಾಕ್ಷಿತೋಟಗಳನ್ನು ಕಾಯುವುದಕ್ಕೆ ಇಟ್ಟರು; ಆದುದರಿಂದ ನನ್ನ ಸ್ವಂತ ದ್ರಾಕ್ಷಿ ತೋಟವನ್ನೂ ನಾನು ಕಾಯ್ದುಕೊಳ್ಳಲಾಗಲಿಲ್ಲ.
7ನನ್ನ ಪ್ರಾಣಪ್ರಿಯನೇ, ನಿನ್ನ ಮಂದೆಯನ್ನು ಎಲ್ಲಿ ಮೇಯಿಸುವೆ? ನಡುಹಗಲಲ್ಲಿ ನಿನ್ನ ಮಂದೆಯು ಎಲ್ಲಿ ವಿಶ್ರಮಿಸುತ್ತಾರೆ? ಹೇಳು. ನಾನೇಕೆ ಅಲೆಮಾರಿಗಳಂತೆ ನಿನ್ನ ಗೆಳೆಯರ ಮಂದೆಗಳ ಹತ್ತಿರ ಅಲೆಯಬೇಕು?
8ಸ್ತ್ರೀಯರಲ್ಲಿ ಅತಿ ಸುಂದರವಾದ ಹೆಣ್ಣು ನೀನು, ನಿನಗಿದು ಗೊತ್ತಿಲ್ಲವಾದರೆ ಹಿಂಡಿನ ಹೆಜ್ಜೆಯ ಜಾಡನ್ನು ಹಿಡಿದು ಹೋಗಿ, ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಮರಿಗಳನ್ನು ಮೇಯಿಸು.
9ಪ್ರಿಯಳೇ, ನಿನ್ನನ್ನು ಫರೋಹನ ರಥವನ್ನೆಳೆವ ಹೆಣ್ಣು ಕುದುರೆಗೆ ಹೋಲಿಸಿದ್ದೇನೆ.
10ನಿನ್ನ ಕೆನ್ನೆಗಳು ಆಭರಣಗಳಿಂದಲೂ, ನಿನ್ನ ಕಂಠವು ಹಾರಗಳಿಂದಲೂ ಎಷ್ಟೋ ಅಂದವಾಗಿವೆ!
11ನಾನು ನಿನಗಾಗಿ ಬಂಗಾರದ ಅಂಚಿನಿಂದ ಕೂಡಿರುವ, ಬೆಳ್ಳಿಯ ಕುಚ್ಚಗಳನ್ನು ಮಾಡಿಸುವೆನು.
12ರಾಜನು ಔತಣದಲ್ಲಿದ್ದಾಗ ಇತ್ತ ನನ್ನ ಸುಗಂಧತೈಲವು ಪರಿಮಳವನ್ನು ಬೀರುತ್ತಿತ್ತು.
13ಎನ್ನಿನಿಯನು ನನ್ನ ಸ್ತನಗಳ ಮಧ್ಯದಲ್ಲಿನ ರಕ್ತಬೋಳದ ಚೀಲ;
14ನನ್ನ ಪಾಲಿಗೆ ನನ್ನ ನಲ್ಲನು ಏನ್ಗೆದಿಯ ದ್ರಾಕ್ಷಿ ತೋಟಗಳ ಗೋರಂಟೆಯ ಹೂಗೊಂಚಲು.
15ಆಹಾ, ನನ್ನ ಪ್ರಿಯಳೇ, ನೀನು ಎಷ್ಟು ಚೆಲುವೆ, ಆಹಾ, ನೀನು ಎಷ್ಟು ಸುಂದರಿ! ನಿನ್ನ ನೇತ್ರಗಳು ಪಾರಿವಾಳಗಳಂತಿವೆ.
16ಆಹಾ, ಎನ್ನಿನಿಯನೇ, ನೀನೆಷ್ಟು ಸುಂದರ, ನೀನೆಷ್ಟು ಮನೋಹರ! ಹಚ್ಚ ಹಸಿರು ಚಿಗುರುಗಳು ನಮ್ಮ ಮಂಚ,

Read ಪ.ಗೀ. 1ಪ.ಗೀ. 1
Compare ಪ.ಗೀ. 1:5-16ಪ.ಗೀ. 1:5-16