28ನನ್ನ ಕೃಪೆಯು ಅವನಲ್ಲಿ ಶಾಶ್ವತವಾಗಿ ಇರುವುದು; ನನ್ನ ಒಡಂಬಡಿಕೆಯು ಅವನಲ್ಲಿ ಸ್ಥಿರವಾಗಿರುವುದು.
29ಅವನ ಸಂತಾನವನ್ನು ಯಾವಾಗಲೂ ಉಳಿಸುವೆನು. ಅವನ ಸಿಂಹಾಸನವು ಆಕಾಶವಿರುವವರೆಗೂ ಇರುವುದು.
30ಅವನ ಸಂತಾನದವರು ನನ್ನ ಧರ್ಮಶಾಸ್ತ್ರವನ್ನು ಬಿಟ್ಟು, ನನ್ನ ಆಜ್ಞೆಗಳಲ್ಲಿ ನಡೆಯದೆ,
31ನನ್ನ ವಿಧಿಗಳನ್ನು ಮೀರಿ, ನನ್ನ ನೇಮಗಳನ್ನು ಪಾಲಿಸದೆ ಹೋದರೆ,
32ಆಗ ನಾನು ಅವರ ದ್ರೋಹಕ್ಕಾಗಿ ಅವರನ್ನು ಬೆತ್ತದಿಂದ ಹೊಡೆಯುವೆನು; ಅವರ ಅಪರಾಧಕ್ಕಾಗಿ ಪೆಟ್ಟುಕೊಡುವೆನು.
33ಆದರೂ ನಾನು ಅವನಲ್ಲಿಟ್ಟಿರುವ ಕೃಪೆಯನ್ನು ತಪ್ಪಿಸುವುದಿಲ್ಲ; ನನ್ನ ನಂಬಿಗಸ್ತಿಕೆಯಿಂದ ಜಾರುವುದಿಲ್ಲ.
34ನನ್ನ ಒಡಂಬಡಿಕೆಯನ್ನು ಭಂಗಪಡಿಸುವುದಿಲ್ಲ; ನನ್ನ ಮಾತನ್ನು ಬದಲಿಸುವುದಿಲ್ಲ.