Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 26

ಅ. ಕೃ. 26:10-18

Help us?
Click on verse(s) to share them!
10ಯೆರೂಸಲೇಮಿನಲ್ಲಿ ಹಾಗೆಯೇ ಮಾಡಿದ್ದೆನು. ಮುಖ್ಯಯಾಜಕರಿಂದ, ಅಧಿಕಾರವನ್ನು ಪಡೆದು ದೇವಜನರಲ್ಲಿ ಅನೇಕರನ್ನು ಸೆರೆಮನೆಗಳಲ್ಲಿ ಇರಿಸಿ, ಅವರಿಗೆ ಮರಣದ ತೀರ್ಪಾದಾಗ, ನಾನು ಅದಕ್ಕೆ ಸಮ್ಮತಿಯನ್ನು ಸೂಚಿಸಿದೆನು.
11ಎಲ್ಲಾ ಸಭಾಮಂದಿರಗಳಲ್ಲಿಯೂ, ನಾನು ಅನೇಕ ಸಾರಿ ಅವರನ್ನು ದಂಡಿಸಿ ಅವರಿಂದ ದೇವದೂಷಣೆಯ ಮಾತುಗಳನ್ನಾಡಿಸುವುದಕ್ಕೆ ಪ್ರಯತ್ನಿಸಿದೆನು. ಇದಲ್ಲದೆ ಅವರ ಮೇಲೆ ಬಹು ಕೋಪಾವೇಶವುಳ್ಳವನಾಗಿ ಬೇರೆ ಪಟ್ಟಣಗಳವರೆಗೂ ಹೋಗಿ, ಅವರನ್ನು ಹಿಂಸೆಪಡಿಸಿದೆನು.
12ಈ ಉದ್ದೇಶದಿಂದ ನಾನು ಮುಖ್ಯಯಾಜಕರಿಂದ ಅಧಿಕಾರವನ್ನೂ, ಆದೇಶವನ್ನೂ ಹೊಂದಿ ದಮಸ್ಕಕ್ಕೆ ಹೋಗುವ ದಾರಿಯಲ್ಲಿ ರಾಜನೇ,
13ಮಧ್ಯಾಹ್ನದ ಹೊತ್ತಿನಲ್ಲಿ ಪರಲೋಕದಿಂದ ಒಂದು ಬೆಳಕು ನನ್ನ ಸುತ್ತಲೂ ಮತ್ತು ನನ್ನ ಜೊತೆಯಲ್ಲಿ ಪ್ರಯಾಣಮಾಡುತ್ತಿದ್ದವರ ಸುತ್ತಲೂ ಸೂರ್ಯನ ಹೊಳಪಿಗಿಂತ ಹೆಚ್ಚಾಗಿ ಹೊಳೆಯುವುದನ್ನು ನಾನು ಕಂಡೆನು.
14ನಾವೆಲ್ಲರು ನೆಲಕ್ಕೆ ಬೀಳಲು; ‘ಸೌಲನೇ, ಸೌಲನೇ, ನನ್ನನ್ನು ಏಕೆ ಹಿಂಸೆಪಡಿಸುತ್ತೀ? ಮುಳ್ಳುಗೋಲನ್ನು ಒದೆಯುವುದರಿಂದ ನಿನಗೇ ಹಾನಿಯಲ್ಲವೇ? ಎಂದು ಇಬ್ರಿಯ ಭಾಷೆಯಿಂದ ಹೇಳುವ ವಾಣಿಯನ್ನು’ ಕೇಳಿದೆನು.
15ಆಗ ನಾನು; ‘ಕರ್ತನೇ, ನೀನಾರು?’ ಅನ್ನಲು ಕರ್ತನು; ‘ನೀನು ಹಿಂಸೆಪಡಿಸುವ ಯೇಸುವೇ ನಾನು.
16ನೀನು ಎದ್ದು, ನಿಂತುಕೋ. ನಿನ್ನನ್ನು ನನ್ನ ಸೇವಕನಾಗಿಯೂ, ಸಾಕ್ಷಿಯಾಗಿಯೂ ನೇಮಿಸುವುದಕ್ಕೋಸ್ಕರ ನಿನಗೆ ಕಾಣಿಸಿಕೊಂಡಿದ್ದೇನೆ. ಈಗಲೂ, ಮುಂದೆಯೂ ನಿನಗೆ ತೋರಿಸಲಿರುವ ದರ್ಶನಗಳಲ್ಲಿಯೂ, ನಿನಗೆ ಕಾಣಿಸಿಕೊಂಡದ್ದನ್ನು ಕುರಿತು ನೀನು ನನ್ನ ಸಾಕ್ಷಿಯಾಗಿರಬೇಕು.
17ನಾನು ನಿನ್ನ ಸ್ವಂತ ಜನರಿಂದಲೂ, ಅನ್ಯಜನರಿಂದಲೂ ನಿನ್ನನ್ನು ರಕ್ಷಿಸುವೆನು.
18ಅವರು ಕತ್ತಲೆಯಿಂದ ಬೆಳಕಿಗೂ, ಸೈತಾನನ ಅಧಿಕಾರದಿಂದ ದೇವರ ಕಡೆಗೂ ತಿರುಗಿಕೊಂಡು, ನನ್ನಲ್ಲಿ ನಂಬಿಕೆಯಿಡುವುದರಿಂದ ಪಾಪಕ್ಷಮಾಪಣೆಯನ್ನೂ, ಪರಿಶುದ್ಧರೊಂದಿಗೆ ಹಕ್ಕನ್ನೂ ಹೊಂದುವಂತೆ, ಅವರ ಕಣ್ಣುಗಳನ್ನು ತೆರೆಯಬೇಕೆಂದು ಅವರ ಬಳಿಗೆ ನಾನು ನಿನ್ನನ್ನು ಕಳುಹಿಸುತ್ತೇನೆ’ ಅಂದನು.

Read ಅ. ಕೃ. 26ಅ. ಕೃ. 26
Compare ಅ. ಕೃ. 26:10-18ಅ. ಕೃ. 26:10-18