Text copied!
CopyCompare
ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019 - ಅ. ಕೃ. - ಅ. ಕೃ. 22

ಅ. ಕೃ. 22:12-20

Help us?
Click on verse(s) to share them!
12“ಅಲ್ಲಿ ಧರ್ಮಶಾಸ್ತ್ರಕ್ಕೆ ಸರಿಯಾಗಿ ನಡೆಯುವ ದೈವಭಕ್ತನೂ, ಆ ಸ್ಥಳದ ಯೆಹೂದ್ಯರೆಲ್ಲರಿಂದ
13ಒಳ್ಳೆಯವನೆಂದು ಹೆಸರು ಹೊಂದಿದವನೂ ಆಗಿದ್ದ ಅನನೀಯನೆಂಬವನು ನನ್ನ ಬಳಿಗೆ ಬಂದು, ನಿಂತು; ‘ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದಿಕೋ’ ಎಂದು ಹೇಳಿದನು. ಹೇಳಿದ ತಕ್ಷಣವೇ ನನಗೆ ಕಣ್ಣು ಕಾಣಿಸಿತು, ನಾನು ಅವನನ್ನು ನೋಡಿದೆನು.
14“ಆಗ ಅವನು; ‘ನಮ್ಮ ಪೂರ್ವಿಕರ ದೇವರು, ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ, ಆ ನೀತಿವಂತನನ್ನು ನೋಡುವುದಕ್ಕೂ, ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ.
15ನೀನು ಕಂಡು, ಕೇಳಿದ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು.
16ಈಗ ನೀನೇಕೆ ತಡಮಾಡುತ್ತೀ? ಎದ್ದು ಕರ್ತನ ಹೆಸರನ್ನು ಹೇಳಿಕೊಳ್ಳುವವನಾಗಿ, ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೋ’ ಅಂದನು.
17“ಅನಂತರದಲ್ಲಿ ನಾನು ಯೆರೂಸಲೇಮಿಗೆ ಹಿಂತಿರುಗಿ ಬಂದು ದೇವಾಲಯದೊಳಗೆ ಪ್ರಾರ್ಥನೆಮಾಡುತ್ತಿದ್ದಾಗ, ಧ್ಯಾನಪರವಶನಾಗಿ ಅವನನ್ನು ಕಂಡೆನು.
18ಆತನು; ‘ನೀನು ತ್ವರೆಪಟ್ಟು ಬೇಗನೆ ಯೆರೂಸಲೇಮಿನಿಂದ ಹೊರಟುಹೋಗು, ನನ್ನ ವಿಷಯದಲ್ಲಿ, ನೀನು ಹೇಳುವ ಸಾಕ್ಷಿಯನ್ನು ಅವರು ಅಂಗೀಕರಿಸುವುದಿಲ್ಲ’ ಅಂದನು.
19“ಅದಕ್ಕೆ ನಾನು; ‘ಕರ್ತನೇ, ಎಲ್ಲಾ ಸಭಾಮಂದಿರಗಳಲ್ಲಿ, ನಿನ್ನ ಮೇಲೆ ನಂಬಿಕೆಯಿಟ್ಟವರನ್ನು, ನಾನು ಸೆರೆಮನೆಯಲ್ಲಿ ಹಾಕಿಸುತ್ತಾ, ಹೊಡಿಸುತ್ತಾ ಇದ್ದೆನೆಂಬುದನ್ನು,
20ಮತ್ತು ನಿನ್ನ ಸಾಕ್ಷಿಯಾದ ಸ್ತೆಫನನ ರಕ್ತವು ಚೆಲ್ಲಿಸಲ್ಪಟ್ಟಾಗ, ನಾನೂ ಹತ್ತಿರ ನಿಂತು ಅದನ್ನು ಸಮ್ಮತಿಸಿ, ಅವನನ್ನು ಕೊಂದವರ ವಸ್ತ್ರಗಳನ್ನು ಕಾಯುತ್ತಿದ್ದೆನಲ್ಲಾ’ ಎಂಬುದು ಅವರೇ ಬಲ್ಲವರಾಗಿದ್ದಾರೆ.

Read ಅ. ಕೃ. 22ಅ. ಕೃ. 22
Compare ಅ. ಕೃ. 22:12-20ಅ. ಕೃ. 22:12-20